ಜೈಲಿನಲ್ಲಿ ಕಸ ಗುಡಿಸ್ತಿದ್ದಾರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

Krishnaveni K

ಶನಿವಾರ, 6 ಏಪ್ರಿಲ್ 2024 (08:58 IST)
ನವದೆಹಲಿ: ಅಬಕಾರಿ ಅಕ್ರಮ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿ ಏನೆಲ್ಲಾ ಮಾಡ್ತಿದ್ದಾರೆ ಎಂಬ ದಿನಚರಿ ಬಹಿರಂಗವಾಗಿದೆ.
 

ಮಾರ್ಚ್ 21 ರಂದು ಅರವಿಂದ್ ಕೇಜ್ರಿವಾಲ್ ರನ್ನು ಜಾರಿ ನಿರ್ದೇಶನಾಲಯ ದೆಹಲಿ ಅಬಕಾರಿ ಅಕ್ರಮ ಹಗರಣದಲ್ಲಿ ಬಂಧಿತರಾಗಿದ್ದರು. ನ್ಯಾಯಾಲಯ ಅವರಿಗೆ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನ ಮುಂದುವರಿಸಿ ಆದೇಶ ಹೊರಡಿಸಿತ್ತು.

ಕೇಜ್ರಿವಾಲ್ ಗೆ ಜೈಲಿನಲ್ಲಿ ಅನಾರೋಗ್ಯ ಸಮಸ್ಯೆ ಕಾಡಿತ್ತು. ಇದಕ್ಕಾಗಿ ಅರವಿಂದ್ ಕೇಜ್ರಿವಾಲ್ ಸೂಕ್ತ ಔಷಧಿ ಮತ್ತು ಮನೆ ಊಟಕ್ಕೆ ಅವಕಾಶ ನೀಡಲಾಗಿದೆ. ಇದಲ್ಲದೆ ಅವರಿಗೆ ಜೈಲಿನ ಕೊಠಡಿಯಲ್ಲಿ ಟಿವಿ ವ್ಯವಸ್ಥೆಯೂ ಇದೆ. ಪತ್ನಿ ಸುನೀತಾ, ಅವರ ಪರ ವಕೀಲರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ.

ಅರವಿಂದ್ ಕೇಜ್ರಿವಾಲ್ ಪ್ರತಿ ನಿತ್ಯ ಎದ್ದ ಕೂಡಲೇ ಮಾಡುವ ಕೆಲಸವೆಂದರೆ ಅವರ ಜೈಲಿನ ಕೊಠಡಿಯ ಕಸ ಗುಡಿಸುವುದು. ಕಸ ಗುಡಿಸಿದ ನಂತರ ಕೆಲವು ಹೊತ್ತು ಟಿವಿ ವೀಕ್ಷಿಸುತ್ತಾರೆ. ಇದಾದ ಬಳಿಕ ಯೋಗ ಮಾಡುತ್ತಾರೆ. ಉಪಾಹಾರಕ್ಕೆ ಎರಡು ಸ್ಲೈಸ್ ಬ್ರೆಡ್ ಮತ್ತು ಚಹಾ ಮಾತ್ರ ಸೇವಿಸುತ್ತಾರೆ. ಅದಾದ ಬಳಿಕ ಜೈಲಿನ ಪರಿಸರದಲ್ಲಿ ವಾಕಿಂಗ್ ಮಾಡುತ್ತಾರೆ. ಜೈಲಿನಲ್ಲಿ ಕೇಜ್ರಿವಾಲ್ ದಿನಚರಿ ಹೀಗಿರುತ್ತದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ