ಅವಿಶ್ವಾಸ ಮತ ಸೋತ ಬೆನ್ನಲ್ಲೇ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸುದ್ದಿಗೋಷ್ಠಿ
ಶನಿವಾರ, 21 ಜುಲೈ 2018 (09:49 IST)
ಹೈದರಾಬಾದ್: ತಮ್ಮ ನೇತೃತ್ವದ ಟಿಡಿಪಿ ನಿನ್ನೆ ಲೋಕಸಭೆಯಲ್ಲಿ ಮಂಡಿಸಿದ್ದಅವಿಶ್ವಾಸ ಗೊತ್ತುವಳಿಗೆ ಸೋಲಾಗುತ್ತಿದ್ದಂತೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸುದ್ದಿಗೋಷ್ಠಿ ನಡೆಸಿದ್ದಾರೆ.
ಆಂಧ್ರಕ್ಕೆ ವಿಶೇಷ ಸ್ಥಾನಮಾನ ಸಿಗದ ಕಾರಣ ನಿರಾಸೆ ಅನುಭವಿಸಿದ್ದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು. ಇದಕ್ಕೆ ಸೋಲಾದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿರುವ ಚಂದ್ರಬಾಬು ನಾಯ್ಡು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ನಮಗೆ ಅಹಂಕಾರ ಇದೆ ಎನ್ನುವ ಪ್ರಧಾನಿ ಮೋದಿಗೆ ಅಧಿಕಾರದ ಅಹಂಕಾರವಿದೆ. ಟಿಡಿಪಿ-ಟಿಆರ್ ಎಸ್ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಮೋದಿ ಹೇಳುತ್ತಿರುವುದು ಸುಳ್ಳು. ನಮಗೆ ವಿಶೇಷ ಸ್ಥಾನಮಾನ ನೀಡದೇ ಪ್ರಧಾನಿ ಮೋದಿ ಮತ್ತು ಕೇಂದ್ರ ಆಂಧ್ರ ಜನತೆಗೆ ಅನ್ಯಾಯ ಮಾಡಿದ್ದಾರೆ. ಮೊದಲು ಕಾಂಗ್ರೆಸ್ ರಾಜ್ಯ ವಿಭಜಿಸಿ ಅನ್ಯಾಯ ಮಾಡಿತು. ಈಗ ಬಿಜೆಪಿ ವಿಶೇಷ ಪ್ಯಾಕೇಜ್ ನೀಡದೇ ಬೇಸರ ಉಂಟುಮಾಡಿದೆ ಎಂದು ಚಂದ್ರಬಾಬು ನಾಯ್ಡು ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.