ವಿಲ್ ಪತ್ರ ಬರೆದ ಸಿಎಂ ಜಯಲಲಿತಾ: ಉತ್ತರಾಧಿಕಾರಿ ಯಾರು ಗೊತ್ತಾ?

ಶುಕ್ರವಾರ, 7 ಅಕ್ಟೋಬರ್ 2016 (14:41 IST)
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ತಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಸರ್ವ ಆಸ್ತಿಗೆ, ಮುಂದಿನ ಸಿಎಂ ಸ್ಥಾನಕ್ಕೆ ಉತ್ತರಾಧಿಕಾರಿ ಯಾರಾಗಬೇಕು ಎನ್ನುವ ಬಗ್ಗೆ ವಿಲ್ ಬರೆದಿದ್ದಾರೆ ಎನ್ನುವ ವರದಿಗಳು ಹರಿದಾಡುತ್ತಿವೆ.
 
ತಮಿಳುನಾಡಿನ ಜನಪ್ರಿಯ ನಟ ಅಜಿತ್ ಜನಾನುರಾಗಿಯಾಗಿದ್ದು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಂದ ರಾಜ್ಯದ ಜನತೆಗೆ ಒಳ್ಳೆಯದಾಗಲಿದೆ ಎನ್ನುವ ಕಾರಣಕ್ಕೆ ಜಯಲಲಿತಾ, ತಮ್ಮ ಉತ್ತರಾಧಿಕಾರಿಯಾಗಿ ನಟ ಅಜಿತ್ ಹೆಸರನ್ನು ಬರೆದಿದ್ದಾರೆ ಎನ್ನಲಾಗುತ್ತಿದೆ.
 
ಸಿಎಂ ಜಯಲಲಿತಾ ಅಕ್ರಮ ಆಸ್ತಿ ಹಗರಣದಲ್ಲಿ ಸಿಲುಕಿ ಜೈಲಿನಲ್ಲಿದ್ದಾಗ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಜಯಲಲಿತಾ ಅವರ ಕಟ್ಟಾ ಅಭಿಮಾನಿಯಾದ ಸೆಲ್ವಂ ಯಾವತ್ತೂ ಜಯಲಲಿತಾ ಕುಳಿತುಕೊಳ್ಳುವ ಖುರ್ಚಿಯ ಮೇಲೆ ಆಸೀನರಾಗದೆ ತಮ್ಮ ನಿಷ್ಠೆಯನ್ನು ಮೆರೆದಿದ್ದರು.
 
ಆದರೆ, ಇದೀಗ ಜಯಲಲಿತಾ ಬರೆದಿರುವ ವಿಲ್ ಪತ್ರ ತಮಿಳುನಾಡು ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಹಲವಾರು ಉಹಾಪೋಹಗಳ ವರದಿಗಳು ಪ್ರತಿನಿತ್ಯ ಹರಿದಾಡುತ್ತಿವೆ. ಸತ್ಯ ಯಾವುದು, ಸುಳ್ಳು ಯಾವುದು ಎನ್ನುವುದು ತಿಳಿಯದೇ ಜನತೆ ಪರದಾಡುತ್ತಿದ್ದಾರೆ. 
 
ರಾಜಕೀಯ ಬಗ್ಗೆ ಅನುಭವವಿರದ ನಟ ಅಜಿತ್, ಮುಖ್ಯಮಂತ್ರಿಯಾದರೇ ರಾಜ್ಯಕ್ಕೆ ಯಾವ ರೀತಿ ಒಳ್ಳೆಯದಾಗುತ್ತದೆ ಎಂದು ಸಿಎಂ ಹುದ್ದೆಯ ಆಕಾಂಕ್ಷಿಗಳು ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ