ಮಹಿಳೆಯರಿಗೆ ಮೆಟ್ರೋ, ಬಸ್ ಫ್ರೀ ಟಿಕೆಟ್ ಮಾಡಿದ ದೆಹಲಿ ಸಿಎಂ ಕೇಜ್ರಿವಾಲ್ ಗೆ ಟ್ವಿಟರಿಗರು ಹೇಳಿದ್ದು ಹೀಗೆ

ಮಂಗಳವಾರ, 4 ಜೂನ್ 2019 (09:17 IST)
ನವದೆಹಲಿ: ಕೆಲವೊಮ್ಮೆ ಏನೋ ಮಾಡಲು ಹೋಗಿ ಏನೋ ಆಗುವುದು ಅಂತಾರಲ್ಲ. ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಥಿತಿಯೂ ಅದೇ ಆಗಿದೆ.


ಮಹಿಳೆಯರಿಗೆ ದೆಹಲಿಯ ಮೆಟ್ರೋ ಮತ್ತು ಬಸ್ ಪ್ರಯಾಣ ಉಚಿತ ಎಂದು ಸಿಎಂ ಕೇಜ್ರಿವಾಲ್ ಘೋಷಣೆ ಮಾಡಿದ್ದು ನೋಡಿ ಟ್ವಿಟರಿಗರು ಈಗ ಅವರನ್ನು ಮನಬಂದಂತೆ ಟ್ರೋಲ್ ಮಾಡುತ್ತಿದ್ದಾರೆ.

ಕೇಜ್ರಿವಾಲ್ ನಿರ್ಧಾರ ವಿವಾದಕ್ಕೆ ಕಾರಣವಾಗಿದ್ದು, ಮಹಿಳಾ ಮತದಾರರನ್ನು ಮೆಚ್ಚಿಸಲು ಈ ರೀತಿ ನಾಟಕವಾಡುತ್ತಿದ್ದಾರೆ ಎಂದು ಕೆಲವರು ಆಪಾದಿಸಿದ್ದಾರೆ. ಇನ್ನು ಕೆಲವರು ಓಟಿಗಾಗಿ ಜನ ಏನೆಲ್ಲಾ ಮಾಡ್ತಾರೋ ಎಂದು ಲೇವಡಿ ಮಾಡಿದ್ದಾರೆ. ಇದರ ಬದಲು ಬಾಲಕಿಯರಿಗೆ ಉಚಿತ ಶಿಕ್ಷಣ ಎಂದು ಘೋಷಣೆ ಮಾಡಬಹುದಿತ್ತು. ಉಚಿತವಾಗಿ ಮಹಿಳೆಯರಿಗೆ ಪ್ರಯಾಣಿಸಲು ಅವಕಾಶ ಕೊಟ್ಟರೆ ಅವರಿಗೆ ಸುರಕ್ಷತೆ ನೀಡಿದಂತಾಗುತ್ತದೆಯೇ? ಅಷ್ಟಕ್ಕೂ ಇದಕ್ಕಾಗಿ ಯಾರ ಹಣ ಪೋಲು ಮಾಡುತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ