ನಿರ್ಮಲಾ ಸೀತಾರಾಮನ್ ಹೊಗಳಿದ್ದೇ ರಮ್ಯಾಗೆ ಮುಳುವಾಯಿತೇ?!

ಸೋಮವಾರ, 3 ಜೂನ್ 2019 (09:38 IST)
ನವದೆಹಲಿ: ಕಳೆದ ಕೆಲವು ದಿನಗಳಿಂದಲೂ ಟ್ವೀಟ್ ಗಳಿಂದಾಗಿ ಸ್ವ ಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ತಮ್ಮ ಟ್ವಿಟರ್ ಪೇಜ್ ನ್ನೇ ಡಿಲೀಟ್ ಮಾಡಿದ್ದಾರೆ.


ಈ ರೀತಿ ದಿಡೀರ್ ಆಗಿ ಟ್ವಿಟರ್ ನಿಂದ ಹೊರಬಂದಿರುವುದಕ್ಕೆ ಸರಿಯಾದ ಕಾರಣ ತಿಳಿದುಬಂದಿಲ್ಲ. ಆದರೆ ಎರಡು ದಿನಗಳ ಮೊದಲು ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ವಿತ್ತ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಿರ್ಮಲಾ ಸೀತಾರಾಮನ್ ಗೆ ರಮ್ಯಾ ಅಭಿನಂದನೆ ಸಲ್ಲಿಸಿದ್ದರು.

ಅಲ್ಲದೆ, ಮಹಿಳೆಯಾಗಿ ನಿಮಗೆ ನಮ್ಮ ಬೆಂಬಲವಿದೆ ಎಂದಿದ್ದರು. ರಮ್ಯಾ ಹೀಗೆ ಟ್ವೀಟ್ ಮಾಡಿದ್ದೇ ಅವರಿಗೆ ಕುತ್ತಾಯಿತೇ ಎಂಬ ಅನುಮಾನ ಮೂಡಿದೆ. ಈಗಾಗಲೇ ರಮ್ಯಾ ಅಧಿಕಾರ ವ್ಯಾಪ್ತಿಗೆ ಹಲವು ಬಾರಿ ಕತ್ತರಿ ಹಾಕಲಾಗಿತ್ತು. ಮೋದಿ ವಿರುದ್ಧ ಮಾಡಿದ ಹಲವು ಟ್ವೀಟ್ ಗಳಿಂದ ಅವರು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ