ದೀಪ ಹಚ್ಚಿದ ಹಳೆಯ ಫೋಟೋದಿಂದ ಟ್ರೋಲ್ ಗೊಳಗಾದ ಕೇರಳ ಸಿಎಂ ಪಿಣರಾಯಿ ವಿಜಯನ್

ಸೋಮವಾರ, 6 ಏಪ್ರಿಲ್ 2020 (10:48 IST)
ತಿರುವನಂತಪುರಂ: ಪ್ರಧಾನಿ ಮೋದಿಯವರ ದೀಪ ಹಚ್ಚುವ ಸಂಪ್ರದಾಯವನ್ನು ಟೀಕೆ ಮಾಡಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ನಿನ್ನೆಯ ದಿನ ತಾವೇ ದೀಪ ಹಚ್ಚಿ ತಮ್ಮ ಸಿದ್ಧಾಂತವನ್ನು ಮರೆತರೇ?


ಪಿಣರಾಯಿ ದೀಪದ ಎದುರು ಕೂತಿರುವ ಫೋಟೋ ನೋಡಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಆದರೆ ಅಸಲಿ ಸಂಗತಿಯೇ ಬೇರೆ ಇದೆ.

ನಿಜವಾಗಿ ನಿನ್ನೆ ಪಿಣರಾಯಿ ವಿಜಯನ್ ದೀಪ ಹಚ್ಚಿರಲಿಲ್ಲ. ಪಿಣರಾಯಿ ವಿಜಯನ್ 2018 ರಲ್ಲಿ ಅರ್ತ್ ಅವರ್ ಸಂದರ್ಭದಲ್ಲಿ ದೀಪ ಹಚ್ಚಿ ಅದರ ಎದುರು ಕೂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದನ್ನು ನೋಡಿ ಪಿಣರಾಯಿ ನಿನ್ನೆ ದೀಪ ಹಚ್ಚಿದ್ದರು ಎಂದು ಹಲವರು ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ