21 ದಿನಗಳ ಬಳಿಕ ಎಲ್ಲೆಲ್ಲಿ ಲಾಕ್ ಡೌನ್? ಕೇಂದ್ರದ ಸುಳಿವು

ಸೋಮವಾರ, 6 ಏಪ್ರಿಲ್ 2020 (10:00 IST)
ನವದೆಹಲಿ: 21 ದಿನಗಳ ಲಾಕ್ ಡೌನ್ ಮುಕ್ತಾಯವಾಗಲು ಇನ್ನು 7 ದಿನಗಳು ಬಾಕಿಯಿವೆ. ಆದರೆ 21 ದಿನಗಳ ಬಳಿಕ ದೇಶ ಲಾಕ್ ಡೌನ್ ನಿಂದ ಮುಕ್ತಗೊಳ್ಳಲಿದೆಯೇ?


ಮೂಲಗಳ ಪ್ರಕಾರ 21 ದಿನಗಳ ಬಳಿಕವೂ ಸಂಪೂರ್ಣ ಲಾಕ್ ಡೌನ್ ಮುಕ್ತಗೊಳಿಸುವ ಉದ್ದೇಶ ಕೇಂದ್ರಕ್ಕಿಲ್ಲ. ಯಾಕೆಂದರೆ ಕೊರೋನಾವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲೂ ಕೆಲವೇ ಜಿಲ್ಲೆಗಳಲ್ಲಿ ಅತ್ಯಧಿಕ ಸೋಂಕಿತರಿದ್ದಾರೆ.

ಹೀಗಾಗಿ ಈ ಜಿಲ್ಲೆಗಳಲ್ಲಿ ಇದ್ದಕ್ಕಿದ್ದಂತೆ ಲಾಕ್ ಡೌನ್ ಮುಕ್ತಗೊಳಿಸಿದರೆ ಇಷ್ಟು ದಿನ ಲಾಕ್ ಡೌನ್ ಮಾಡಿಯೂ ಯಾವುದೇ ಪ್ರಯೋಜನವಾಗುವುದಿಲ್ಲ. ಹೀಗಾಗಿ ದೇಶದಲ್ಲಿ ಅತ್ಯಧಿಕ ಸೋಂಕಿತರಿರುವ ಜಿಲ್ಲೆಗಳನ್ನು ಅಪಾಯಕಾರಿ ವಲಯ ಎಂದು ಗುರುತಿಸಿ ಇಲ್ಲಿ ಮಾತ್ರವೇ ಲಾಕ್ ಡೌನ್ ಮುಂದುವರಿಸುವ ಇರಾದೆ ಕೇಂದ್ರಕ್ಕಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ