ಇಂದಿನಿಂದ ವಾಣಿಜ್ಯ ಬಳಕೆಯ 19 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ಬೆಲೆ 102.50 ರೂ. ಹೆಚ್ಚಿಸಲಾಗಿದೆ.
ಗ್ಯಾಸ್ ಕಂಪನಿಗಳು ಏಪ್ರಿಲ್ 1ರಿಂದ ಅಂದರೆ ಇಂದಿನಿಂದಲೇ ಜಾರಿಗೆ ಬರುವಂತೆ ಗ್ಯಾಸ್ ಸಿಲಿಂಡರ್ ದರ ಏರಿಕೆ ಮಾಡಿದೆ. ಇದರಿಂದ 19 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ದರ 2253ರೂ.ನಿಂದ 2335.50 ರೂ,ಗೆ ಜಿಗಿತ ಕಂಡಿದೆ.
5 ಕೆಜಿ ತೂಕದ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ದರ 655 ರೂ.ಗೆ ಏರಿಕೆಯಾಗಿದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಸತತ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇದು ಮತ್ತೊಂದು ಹೊರೆಬಿದ್ದಿದೆ.