ದೇಶದಲ್ಲಿಂದು 3324 ಸೋಂಕು ಪತ್ತೆ: 40 ಮಂದಿಗೆ ಕೊರೊನಾಗೆ ಬಲಿ

ಭಾನುವಾರ, 1 ಮೇ 2022 (15:13 IST)

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 3324 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 40 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 19,092ಕ್ಕೆ ಜಿಗಿತ ಕಂಡಿದೆ.

ದೇಶದಲ್ಲಿ ಒಟ್ಟಾರೆ ಸೋಂಕಿತ ಸಂಖ್ಯೆ 4,30,79,188ಕ್ಕೆ ಏರಿಕೆಯಾದರೆ, ಸಾವಿನ ಸಂಖ್ಯೆ 5,23,843ಕ್ಕೆ ಜಿಗಿತ ಕಂಡಿದೆ. ನಿನ್ನೆಗೆ ಹೋಲಿಸಿದರೆ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಅಲ್ಪ ಇಳಿಕೆ ಕಂಡು ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ