ಪ್ರಧಾನಿ ಮೋದಿ ಅಪ್ಪನ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ಮತ್ತೊಂದು ವಿವಾದ ಸೃಷ್ಟಿಸಿದ ಕಾಂಗ್ರೆಸ್
ಯಾರಿಗೂ ಮೋದಿ ತಂದೆ ಬಗ್ಗೆ ಗೊತ್ತಿಲ್ಲ. ಆದರೆ ಎಲ್ಲರಿಗೂ ರಾಹುಲ್ ಗಾಂಧಿಯವರ ಐದು ತಲೆಮಾರುಗಳ ಬಗ್ಗೆ ಗೊತ್ತಿದೆ ಎಂದು ಕಾಂಗ್ರೆಸ್ ನಾಯಕ ವಿಲಾಸ್ ರಾವ್ ಮುತ್ತೇಮ್ವಾರ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಚುನಾವಣೆ ರ್ಯಾಲಿಯಲ್ಲಿ ಪ್ರಧಾನಿ ಮೋದಿಯ ವೈಯಕ್ತಿಕ ವಿಚಾರಗಳ ಬಗ್ಗೆ ಕೆದಕಿ ಟೀಕೆ ಮಾಡುತ್ತಿರುವುದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಅಪ್ಪ ಯಾರು ಎಂಬುದು ಇಡೀ ಜಗತ್ತಿಗೇ ಗೊತ್ತು, ಆದರೆ ಮೋದಿ ತಂದೆ ಯಾರು ಎಂಬುದು ಯಾರಿಗಾದರೂ ಗೊತ್ತಾ ಎಂದು ವಿಲಾಸ್ ರಾವ್ ಹೇಳುವ ವಿಡಿಯೋ ಒಂದು ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.