ಆಯುಧ ಪೂಜೆಯನ್ನು ತಮಾಷೆ ಎಂದ ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ನಿಂದಲೇ ವಿರೋಧ

ಗುರುವಾರ, 10 ಅಕ್ಟೋಬರ್ 2019 (09:12 IST)
ನವದೆಹಲಿ: ರಾಫೆಲ್ ಯುದ್ಧ ವಿಮಾನವನ್ನು ಭಾರತಕ್ಕೆ ತರುವ ಮೊದಲು ಆಯುಧ ಪೂಜೆ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕ್ರಮವನ್ನು ಲೇವಡಿ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ.


ಮಾಜಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜನಾಥ್ ಸಿಂಗ್ ರಾಫೆಲ್ ಯುದ್ಧ ವಿಮಾನಕ್ಕೆ ಆಯುಧ ಪೂಜೆ ಮಾಡಿದ್ದು ತಮಾಷೆ. ಹಿಂದೆ ನಾವು ಬೋಫೋರ್ಸ್ ನಂತಹ ಗನ್ ಖರೀದಿ ಮಾಡಿದಾಗ ಯಾರೂ ಪೂಜೆ ಮಾಡಿ ಶೋ ಆಫ್ ಮಾಡಿರಲಿಲ್ಲ ಎಂದು ಖರ್ಗೆ ಲೇವಡಿ ಮಾಡಿದ್ದರು.

ಆದರೆ ಇದಕ್ಕೆ ಕಾಂಗ್ರೆಸ್ ನ ಕೆಲವು ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ. ಆಯುಧ ಪೂಜೆ ಎನ್ನುವುದು ಭಾರತೀಯ ಸಂಪ್ರದಾಯ. ಸಮಸ್ಯೆಯೆಂದರೆ ಕಾಂಗ್ರೆಸ್ ನಾಸ್ತಿಕ. ಕಾಂಗ್ರೆಸ್ ನಲ್ಲಿರುವ ಎಲ್ಲರೂ ನಾಸ್ತಿಕರಲ್ಲ ಎಂದು ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ವಿರೋಧ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ