ಉಗ್ರರನ್ನು ಕಾಂಗ್ರೆಸ್ ರಕ್ಷಿಸುತ್ತಿದೆ : ಶೋಭಾ ಕರಂದ್ಲಾಜೆ

ಶುಕ್ರವಾರ, 21 ಜುಲೈ 2023 (15:30 IST)
ನವದೆಹಲಿ : ಕಾಂಗ್ರೆಸ್ ಸರ್ಕಾರ ಉಗ್ರರರನ್ನು ರಕ್ಷಣೆ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮತ್ತೊಂದು ಉಗ್ರಗಾಮಿ ಚಟುವಟಿಕೆ ಬಯಲಾಗಿದೆ. 2008ರ ಸರಣಿ ಸ್ಫೋಟ ನಡೆದಿತ್ತು, ಆರೋಪಿ ಜೈಲಿನಲ್ಲಿದ್ದಾನೆ. ಜಾಹಿದ್ ತರ್ಬೇಜ್ ಮನೆಯಲ್ಲಿ ನಾಲ್ಕು ಜೀವಂತ ಗ್ರಾನೈಡ್ ಸಿಕ್ಕಿವೆ. ಬಂಧಿಸಿದವರ ಬಳಿ ಏಳು ಕಂಟ್ರಿಮೇಡ್ ಬುಲೆಟ್, ಸ್ಯಾಟಲೈಟ್ ಫೋನ್ ಸೆಟ್ ಸಿಕ್ಕಿವೆ ಎಂದರು.

ಬಾಂಬ್ ಸ್ಫೋಟಕ್ಕೆ ಬೇಕಾದ ಸಾಮಗ್ರಿ ಸಿಕ್ಕಿವೆ. ಮೊಹಮ್ಮದ್ ಜುನೈದ್ ಸಾಮಗ್ರಿ ಸರಬರಾಜು ಮಾಡಿದ್ದಾನೆ. ಜುನೈದ್ ಪಾರ್ಸೆಲ್ ಮೂಲಕ ಸಾಮಗ್ರಿ ಕಳುಹಿಸಿದ್ದಾನೆ. ಕರ್ನಾಟಕ ಗೃಹ ಸಚಿವರು ಇವರು ಅಪರಾಧಿಗಳಲ್ಲ ಎಂದಿದ್ದಾರೆ. ತನಿಖೆಯನ್ನು ದಾರಿ ತಪ್ಪಿಸುವ ವರ್ತನೆ ಇದು. ಭಯೋತ್ಪಾದಕರ ರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಕಿಡಿಕಾರಿದರು. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ