ನವದೆಹಲಿ : ಭಾರತದಲ್ಲಿ ಪ್ರಸ್ತುತ ಕರೊನಾ ಚೇತರಿಕೆ ದರವು ಶೇಕಡ 97.49 ರಷ್ಟಿದೆ. ಅಂದರೆ ಸೋಂಕಿಗೆ ಒಳಗಾಗುವ 100 ಜನರಲ್ಲಿ 97 ರಿಂದ 98 ಜನರು ಗುಣಮುಖರಾಗುತ್ತಿದ್ದಾರೆ.
ದೇಶದಲ್ಲಿ ಈವರೆಗೆ ಕರೊನಾ ಸೋಂಕಿಗೆ ಒಳಗಾಗಿ ಗುಣಮುಖರಾದವರ ಸಂಖ್ಯೆ 3,23,74,497 ಆಗಿದೆ. ಮತ್ತೊಂದೆಡೆ, ಈವರೆಗೆ ಕರೊನಾದಿಂದ 4,42,317 ಜನರು ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 33,376 ಹೊಸ ಕರೊನಾ ಪ್ರಕರಣಗಳು ಕಂಡುಬಂದಿವೆ. ಒಟ್ಟು 32,198 ಜನರು ಗುಣಮುಖರಾಗಿರುವುದು ದಾಖಲಾಗಿದ್ದರೆ, 308 ಜನರು ಕರೊನಾದಿಂದ ಸಾವಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಪ್ರಸ್ತುತ 3,91,516 ಸಕ್ರಿಯ ಕರೊನಾ ಪ್ರಕರಣಗಳಿವೆ.
ಅತಿಹೆಚ್ಚು ಮತ್ತು ಬಹುಪಾಲು ಕರೊನಾ ಕೇಸುಗಳು ಕೇರಳದ್ದೇ ಆಗಿವೆ. ಕಳೆದ 24 ಗಂಟೆಗಳಲ್ಲಿ ಕೇರಳ ರಾಜ್ಯದಲ್ಲಿ 25,010 ಹೊಸ ಕೇಸುಗಳು ದಾಖಲಾಗಿದ್ದರೆ, 177 ಕರೊನಾ ಸಾವುಗಳೂ ವರದಿಯಾಗಿವೆ.
ಲಸಿಕಾ ಅಭಿಯಾನವು ಚುರುಕಿನ ಗತಿಯಲ್ಲಿ ನಡೆಯುತ್ತಿದ್ದು, ಒಟ್ಟು 73,05,89,688 ಡೋಸ್ಗಳಷ್ಟು ಕರೊನಾ ಲಸಿಕೆ ನೀಡಲಾಗಿದೆ. ಕೋವಿನ್ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 65,27,175 ಡೋಸ್ ಲಸಿಕೆ ನೀಡಲಾಗಿದೆ.