ಕೊರೊನಾ ಭೀತಿ : ಕೊವಿಡ್ ಸೋಂಕಿತ ಮಗನನ್ನು ಕಾರ್ ಡಿಕ್ಕಿಯಲ್ಲೇ ಲಾಕ್!

ಶನಿವಾರ, 8 ಜನವರಿ 2022 (13:26 IST)
ನವದೆಹಲಿ : ಕೊವಿಡ್ ಪಾಸಿಟಿವ್ ಇದ್ದ ಮಗನಿಂದ ತನಗೆ ಕೊರೊನಾ ತಗುಲುವ ಭೀತಿಯಲ್ಲಿ ಅಮೆರಿಕದ ಟೆಕ್ಸಾಸ್‌ನಲ್ಲಿ ತಾಯಯೊಬ್ಬಳು ತನ್ನ ಮಗನನನ್ನು ಕಾರಿನ ಡಿಕ್ಕಿಯೊಳಗೆ ಲಾಕ್ ಮಾಡಿರುವುದು ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕೊವಿಡ್ ಪಾಸಿಟಿವ್ ಬಂದಿದ್ದ ಮಗನಿಂದ ತನ್ನನ್ನು ರಕ್ಷಿಸಿಕೊಳ್ಳಲು ತಾಯಿ ಕಾರಿನ ಡಿಕ್ಕಿಯೊಳಗೆ ಮಗನನ್ನು ಲಾಕ್ ಮಾಡಿದ್ದಾಳೆ.

ಇದರಿಂದ ಉಸಿರು ಕಟ್ಟಿದಂತಾಗಿದ್ದ ಮಗನನ್ನು ರಕ್ಷಿಸಲಾಗಿದ್ದು, ತಾಯಿಯನ್ನು ಬಂಧಿಸಲಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಸಾರಾ ಬೀಮ್ ಎಂಬ 41 ವರ್ಷದ ಮಹಿಳೆ ಜನವರಿ 3ರಂದು ತನ್ನ ಮಗನನ್ನು ಕೊರೊನಾ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಳು.

ಆಗ ಆತನಿಗೆ ಕೊರೊನಾ ಪಾಸಿಟಿವ್ ಬಂದಿರುವುದು ದೃಢವಾಗಿತ್ತು. ಹೀಗಾಗಿ, ಆತನಿಂದ ತನಗೂ ಕೊವಿಡ್ ತಗುಲುತ್ತದೆ ಎಂಬ ಆತಂಕದಿಂದ ಆಕೆ ಮಗನನ್ನು ಕಾರಿನ ಡಿಕ್ಕಿಯಲ್ಲಿ ಲಾಕ್ ಮಾಡಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ