ಕೊರೋನಾಗೆ ಆಕ್ಸಿಜನ್ ಪಡೆದವರಿಗೆ ಕಾಡುತ್ತದಂತೆ ಈ ಸಮಸ್ಯೆ!

ಶುಕ್ರವಾರ, 11 ಜೂನ್ 2021 (09:33 IST)
ನವದೆಹಲಿ: ಕೊರೋನಾ ಸೋಂಕಿನ ಸಂದರ್ಭದಲ್ಲಿ ಉಸಿರಾಟದ ಸಮಸ್ಯೆಯಾಗಿ ಆಕ್ಸಿಜನ್ ವ್ಯವಸ್ಥೆ ಅಳವಡಿಸಿ ಚಿಕಿತ್ಸೆಗೊಳಗಾದವರಿಗೆ ಮೆದುಳಿನಲ್ಲಿ ಈ ಸಮಸ್ಯೆ ಕಾಡುತ್ತದೆ ಎಂದು ನರರೋಗ ತಜ್ಞರ ತಂಡವೊಂದು ಅಭಿಪ್ರಾಯಪಟ್ಟಿದೆ.


ತೀರಾ ವಿಷಮ ಸ್ಥಿತಿಯಲ್ಲಿ ಕೊರೋನಾಗೆ ಸುದೀರ್ಘ ಕಾಲದವರೆಗೆ ಆಕ್ಸಿಜನ್ ಅಳವಡಿಸಿ ಚಿಕಿತ್ಸೆ ಪಡೆದವರಿಗೆ ಮೆದುಳಿನ ಬೂದು ದ್ರವ್ಯ (ಗ್ರೇ ಮ್ಯಾಟರ್) ಕಡಿಮೆಯಾಗುವ ಸಮಸ್ಯೆ ಬರುತ್ತದೆ ಎಂದು ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯ ನರರೋಗ ತಜ್ಞರು ಸಂಶೋಧನೆ ನಡೆಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೂದು ದ್ರವ್ಯ ಎನ್ನುವುದು ನಮ್ಮ ಮೆದುಳಿನಲ್ಲಿ ಸಂದೇಶ ವಾಹಕವಾಗಿ ಕೆಲಸ ಮಾಡುತ್ತದೆ. ಅಲ್ಲದೆ, ವ್ಯಕ್ತಿಯ ಚಲನೆ, ಭಾವನೆ, ನೆನಪಿನ ಶಕ್ತಿಯನ್ನು ನಿಯಂತ್ರಿಸುತ್ತದೆ. ಹೀಗಾಗಿ ಬೂದು ದ್ರವ್ಯ ಕಡಿಮೆಯಾದರೆ ಮನುಷ್ಯನಿಗೆ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ