ಕೊರೊನಾ ಟೆಸ್ಟ್ ಮಾಡ್ತೀನಿ ಅಂತ ಯುವತಿಯ ಗುಪ್ತಾಂಗಕ್ಕೆ ಕೈಹಾಕಿದ

ಗುರುವಾರ, 30 ಜುಲೈ 2020 (18:45 IST)
ಡೆಡ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿರುವಂತೆ, ವೈರಸ್ ಭಯದಲ್ಲಿರುವ ಜನರನ್ನು ದುರುಪಯೋಗ ಪಡೆಸಿಕೊಳ್ಳಲು ಅಲ್ಲಲ್ಲಿ ಕಾಮುಕರು ಮುಂದಾಗುತ್ತಿದ್ದಾರೆ.

23 ವರ್ಷದ ಯುವತಿಯನ್ನು ಪುಸಲಾಯಿಸಿ ಕೊರೊನಾ ಟೆಸ್ಟ್ ಮಾಡೋದಾಗಿ ಹೇಳಿ ಆಸ್ಪತ್ರೆಯೊಂದರ ಲ್ಯಾಬ್ ಟೆಕ್ನಿಷಿಯನ್ ಆಕೆಯ ಗುಪ್ತಾಂಗಕ್ಕೆ ಕೈ ಹಾಕಿದ್ದಾನೆ.

ಯುವತಿಯ ಗುಪ್ತಾಂಗದಿಂದ ಸ್ಯಾಂಪಲ್ ಪಡೆದುಕೊಳ್ಳುವಂತೆ ನಾಟಕವಾಡಿ ವಿಕೃತಿ ಮೆರೆದಿದ್ದಾನೆ.

ವೈದ್ಯರ ಹತ್ತಿರ ಯುವತಿ ವಿಚಾರಿಸಿದಾಗ, ಕಾಮುಕ ಲ್ಯಾಬ್ ಟೆಕ್ನಿಷಿಯನ್ ಬಣ್ಣ ಬಯಲಾಗಿದ್ದು, ಆತನ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಈ ಹೀನ ಕೃತ್ಯ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ