ಕೊರೋನಾ ವ್ಯಾಕ್ಸಿನ್ ನಿಂದ ಪುರುಷತ್ವಕ್ಕೆ ಧಕ್ಕೆ? ಆರೋಗ್ಯ ಇಲಾಖೆ ಹೇಳಿದ್ದೇನು?

ಗುರುವಾರ, 1 ಜುಲೈ 2021 (11:22 IST)
ನವದೆಹಲಿ: ಕೊರೋನಾ ವ್ಯಾಕ್ಸಿನ್ ಪಡೆಯುವುದರಿಂದ ಮಹಿಳೆಯರು ಮಾತ್ರವಲ್ಲ, ಪುರುಷರಲ್ಲೂ ಬಂಜೆತನ ಬರುತ್ತದೆ ಎಂಬ ಸುದ್ದಿಗಳ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.


ಕೆಲವು ದಿನಗಳ ಮೊದಲು ವ್ಯಾಕ್ಸಿನ್ ನಿಂದ ಮಹಿಳೆಯರಲ್ಲಿ ಬಂಜೆತನ ಬರುತ್ತದೆ. ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ ಎಂಬ ಸುದ್ದಿ ಹಬ್ಬಿತ್ತು. ಇದೆಲ್ಲಾ ಸುಳ್ಳು ಎಂದು ಕೇಂದ್ರ ಸ್ಪಷ್ಟನೆ ನೀಡಿತ್ತು.

ಇದೀಗ ಪುರುಷತ್ವಕ್ಕೂ ಧಕ್ಕೆಯಾಗುತ್ತದೆ ಎಂಬ ಸುದ್ದಿಗಳ ಬಗ್ಗೆ ಮತ್ತೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ವ್ಯಾಕ್ಸಿನ್ ಪಡೆಯುವುದರಿಂದ ಪುರುಷ ಅಥವಾ ಮಹಿಳೆಯರಲ್ಲಿ ಬಂಜೆತನ ಬರಲ್ಲ. ಇದು ಸಂಪೂರ್ಣ ಧೃಢೀಕೃತ ಲಸಿಕೆ. ಹೀಗಾಗಿ ಯಾವುದೇ ಭಯ ಬೇಡ ಎಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ