ಪಾಕಿಸ್ತಾನದ ಹಿಂದೂಗಳಿಗೆ ಸಹಾಯ ಮಾಡಲು ಹರ್ಭಜನ್, ಯುವರಾಜ್ ಸಿಂಗ್ ಗೆ ಪಾಕ್ ಕ್ರಿಕೆಟಿಗನ ಮನವಿ

ಶನಿವಾರ, 4 ಏಪ್ರಿಲ್ 2020 (09:31 IST)
ಇಸ್ಲಾಮಾಬಾದ್: ಮೊನ್ನೆಯಷ್ಟೇ ಶಾಹಿದ್ ಅಫ್ರಿದಿಯ ಚ್ಯಾರಿಟಿಗೆ ಕೊರೋನಾ ವಿರುದ್ಧ ಹೋರಾಡಲು ನೆರವಾಗುವಂತೆ ಕರೆ ಕೊಟ್ಟಿದ್ದ ಟೀಂ ಇಂಡಿಯಾ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಗೆ ಈಗ ಅಲ್ಲಿನ ಅಲ್ಪಸಂಖ್ಯಾತರಿಗೂ ನೆರವು ನೀಡುವಂತೆ ಮನವಿ ಮಾಡಲಾಗಿದೆ.


ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಧನೀಶ್ ಕನೇರಿಯಾ ಈ ಮನವಿ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್ ಧರ್ಮೀಯರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪವಿದೆ.

ಹೀಗಾಗಿ ಅವರಿಗೆ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದು, ಇವರಿಗೆ ನೆರವು ನೀಡಿ ಕನೇರಿಯಾ ಟ್ವೀಟ್ ಮೂಲಕ ಭಾರತೀಯ ಕ್ರಿಕೆಟಿಗರಿಗೆ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ