ಕೊರೋನಾ ವಿರುದ್ಧ ಕೊಹ್ಲಿ ರೀತಿ ಹೋರಾಟ ಮನೋಭಾವ ಬೇಕು ಎಂದ ಪ್ರಧಾನಿ ಮೋದಿ

ಶನಿವಾರ, 4 ಏಪ್ರಿಲ್ 2020 (09:25 IST)
ನವದೆಹಲಿ: ಕೊರೋನಾ ತಡೆಗೆ ಜಾಗೃತಿ ಮೂಡಿಸಲು ದೇಶದ ಪ್ರಮುಖ ಕ್ರೀಡಾಳುಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ ಟೀಂ ಇಂಡಿಯಾ ರೀತಿ ಹೋರಾಡಬೇಕು, ವಿರಾಟ್ ಕೊಹ್ಲಿ ರೀತಿ ಹೋರಾಟದ ಮನೋಭಾವ ತೋರಬೇಕು ಎಂದಿದ್ದಾರೆ.


ಕ್ರೀಡಾ ಸಚಿವ ಕಿರಣ್ ರಿಜಿಜು ಜತೆಗೆ ದೇಶದ ಎಲ್ಲಾ ಕ್ರೀಡಾ ಕ್ಷೇತ್ರದ ದಿಗ್ಗಜರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಪ್ರಧಾನಿ ಮೋದಿ ಕೊರೋನಾ ವಿರುದ್ಧ ಹೋರಾಟಕ್ಕೆ ಬೆಂಬಲ ನೀಡುವಂತೆ ಕರೆ ನೀಡಿದ್ದಾರೆ.

ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಕ್ರಿಕೆಟಿಗರ ಪೈಕಿ ಗಂಗೂಲಿ, ವಿರಾಟ್ ಕೊಹ್ಲಿ, ಧೋನಿ, ಸಚಿನ್ ತೆಂಡುಲ್ಕರ್, ಕೆಎಲ್ ರಾಹುಲ್, ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಮೊಹಮ್ಮದ್ ಶಮಿ, ಯುವರಾಜ್ ಸಿಂಗ್ ಮತ್ತು ಚೇತೇಶ್ವರ ಪೂಜಾರ ಮತ್ತಿತರರು ಪಾಲ್ಗೊಂಡಿದ್ದರು.

ಇವರಲ್ಲದೆ, ಕ್ರೀಡಾ ತಾರೆಗಳಾದ ಪಿವಿ ಸಿಂಧು, ಹಿಮಾದಾಸ್, ಪಿಟಿ ಉಶಾ, ಪುಲ್ಲೇಲ ಗೋಪಿಚಂದ್ ಮುಂತಾದ ಘಟಾನುಘಟಿಗಳು ಭಾಗವಹಿಸಿ ಸಂವಾದ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ