ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ಜಿಎಸ್ ಟಿ ವ್ಯಾಪ್ತಿಗಿಲ್ಲ- ಅರುಣ್ ಜೇಟ್ಲಿ

ಮಂಗಳವಾರ, 6 ಫೆಬ್ರವರಿ 2018 (09:10 IST)

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ವ್ಯಾಪ್ತಿಗೆ ಪೆಟ್ರೋಲ್ ಹಾಗೂ ಡೀಸೆಲ್ ಒಳಪಡಿಸಲು ರಾಜ್ಯ ಸರ್ಕಾರಗಳಿಂದ ಸದ್ಯಕ್ಕೆ ಒಲವು ಕಂಡುಬಂದಿಲ್ಲ ಎಂದು ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದಕ್ಕೆ ಬಹುತೇಕ ರಾಜ್ಯಗಳ ಆಕ್ಷೇಪ ಇದೆ. ಮುಂದೊಂದು ದಿನ ರಿಯಲ್ಎಸ್ಟೇಟ್‌, ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಹೊಸ ತೆರಿಗೆ ವ್ಯವಸ್ಥೆ ವ್ಯಾಪ್ತಿಗೆ ತರುವುದರ ಬಗ್ಗೆ ತಮಗೆ ವಿಶ್ವಾಸ ಇದೆ ಎಂದಿದ್ದಾರೆ.

ಸದ್ಯಕ್ಕೆ ಜಿಎಸ್ಟಿ ವ್ಯಾಪ್ತಿಯಿಂದ ಕಚ್ಚಾ ತೈಲ, ವಿಮಾನ ಇಂಧನ, ನೈಸರ್ಗಿಕ ಅನಿಲ, ಪೆಟ್ರೋಲ್ಮತ್ತು ಡೀಸೆಲ್ಗಳನ್ನು ಹೊರಗೆ ಇಡಲಾಗಿದೆ. ಇದರಿಂದಾಗಿ ಎಲ್ಲ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರದ ಎಕ್ಸೈಸ್ಸುಂಕ ಮತ್ತು ರಾಜ್ಯಗಳ ವ್ಯಾಟ್ಅನ್ವಯವಾಗುತ್ತಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ