ಮಧ್ಯಪ್ರದೇಶ : ಯುವಕ ಮೋಸ ಮಾಡಿದ್ದಕ್ಕೆ 18 ವರ್ಷದ ಹುಡುಗಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ತರಕಾರಿ ವ್ಯಾಪಾರ ಮಾಡುತ್ತಿದ್ದ 28 ವರ್ಷದ ಯುವಕ ಹುಡುಗಿಯ ಮೇಲೆ ಕಣ್ಣು ಹಾಕಿದ್ದು, ಆಕೆಯ ಜೊತೆ ಸಂಬಂಧ ಬೆಳೆಸಲು ಅವಳ ತಂದೆಯ ಜೊತೆ ಸ್ನೇಹ ಬೆಳೆಸಿದ. ಆಗಾಗ ಮನೆಗೆ ಬಂದು ಹೋಗುತ್ತಿದ್ದ ಆತ ಹುಡುಗಿಯ ಜೊತೆ ಸಂಬಂಧ ಬೆಳೆಸಿದ್ದಾನೆ. ಬಳಿಕ ಆಕೆಗೆ ಮೋಸ ಮಾಡಿದ್ದಾನೆ.
ಇದರಿಂದ ನೊಂದ ಹುಡುಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.