ಮುಸ್ಲಿಮರು ಸೋಷಿಯಲ್ ಮೀಡಿಯಾದಲ್ಲಿ ಫೋಟೊ ಹಾಕುವುದು ಬ್ಯಾನ್
ಗುರುವಾರ, 19 ಅಕ್ಟೋಬರ್ 2017 (19:06 IST)
ನವದೆಹಲಿ: ಇತ್ತೀಚೆಗಷ್ಟೇ ಮುಸ್ಲಿಂ ಮಹಿಳೆಯರು ಹೇರ್ ಸ್ಟೈಲ್, ಐಬ್ರೋ ಶೇಪ್ ಮಾಡುವುದು ಧರ್ಮಕ್ಕೆ ವಿರುದ್ಧವಾದದ್ದು ಎಂದು ಫತ್ವಾ ಹೊರಡಿಸಿತ್ತು. ಇದಕ್ಕೆ ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು. ಈಗ ಮತ್ತೊಂದು ಹೊಸ ಫತ್ವಾ ಹೊರಡಿಸಿದೆ. ಮುಸ್ಲಿಮರು ಸ್ತ್ರೀಯರಾಗಿರಲಿ, ಪುರುಷರಾಗಿರಲಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೊ ಹಾಕಬಾರದು ಎಂದು ಫತ್ವಾ ಹೊರಡಿಸಿದೆ.
ಉತ್ತರ ಪ್ರದೇಶದ ಶಹರನ್ ಪುರ್ ಜಿಲ್ಲೆಯ ದಿಯೋಬಂದ್ ನ ದರುಲ್ ಉಲೂಮ್ ಎಂಬ ಇಸ್ಲಾಮಿಕ್ ಸೆಮಿನರಿ ಫತ್ವಾ ಹೊರಡಿಸಿದೆ. ಭಾರತೀಯ ಮುಸ್ಲಿಮರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಪೋಸ್ಟ್ ಮಾಡುವುದು ಇಸ್ಲಾಂ ಧರ್ಮಕ್ಕೆ ವಿರುದ್ಧ. ಹೀಗಾಗಿ ಮುಸ್ಲಿಂ ಪುರುಷರಾಗಲಿ, ಮಹಿಳೆಯರಾಗಿರಲಿ ತಮ್ಮ, ತಮ್ಮ ಕುಟುಂಬದವರ ಫೋಟೊಗಳನ್ನ ಪೋಸ್ಟ್ ಮಾಡಬಾರದು ಎಂದು ದರುಲ್ ಉಲೂಮ್ ಫತ್ವಾ ಹೊರಡಿಸಿದೆ.
ಅನಗತ್ಯವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಫೋಟೊಗಳನ್ನು ಹಾಕುವುದು ತಪ್ಪು. ದರುಲ್ ಉಲೂಮ್ ಹೊರಡಿಸಿರುವ ಫತ್ವಾಮೆಚ್ಚುವಂತಹದ್ದು ಎಂದು ದರುಲ್ ಉಲೂಮ್ ಮುಖಂಡ ಶಹನವಾಜ್ ಖಾದ್ರಿ ಹೇಳಿದ್ದಾರೆ.