ಮುಸ್ಲಿಂ ಮಹಿಳೆಯರು ಹುಬ್ಬ ಕತ್ತರಿಸುವಂತಿಲ್ಲ!

ಭಾನುವಾರ, 8 ಅಕ್ಟೋಬರ್ 2017 (11:11 IST)
ನವದೆಹಲಿ: ಮುಸ್ಲಿಂ ಮಹಿಳೆಯರು ಹುಬ್ಬು ಕತ್ತರಿಸುವುದು (ಐಬ್ರೋ ಶೇಪ್), ಕೂದಲಿಗೆ ಕತ್ತರಿ ಹಾಕುವುದು ಮಾಡುವಂತಿಲ್ಲ  ಎಂದು ಇಸ್ಲಾಮಿಕ್ ಧಾರ್ಮಿಕ ಸಂಸ್ಥೆ ದರುಲ್ ಉಲೂಮ್ ದಿಯೋಬಂದ್ ಫತ್ವಾ ಹೊರಡಿಸಿದೆ.

 
ಈ ರೀತಿ ಮಾಡುವುದು ಇಸ್ಲಾಂ ಧರ್ಮ ವಿರೋಧಿ ಎಂದು ಅದು ಹೇಳಿದೆ. ಸಹರನ್ ಪುರದ ವ್ಯಕ್ತಿಯೊಬ್ಬ ಐಬ್ರೋ ಶೇಪ್ ಮಾಡುವುದು ಇಸ್ಲಾಂ ಧರ್ಮದಲ್ಲಿ ಸಮ್ಮತವೇ ಎಂದು ದರುಲ್ ಧರ್ಮಗುರುಗಳಿಗೆ ಪ್ರಶ್ನಿಸಿದ್ದಕ್ಕೆ ಸಂಸ್ಥೆ ಈ ರೀತಿ ಫತ್ವಾ ಹೊರಡಿಸಿದೆ.

ಒಂದು ಮುಸ್ಲಿಂ ಮಹಿಳೆಯೊಬ್ಬಳು ಹೀಗೆ ಮಾಡಿದರೆ ಆಕೆ ಇಸ್ಲಾಂ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾಳೆ ಎಂದರ್ಥ ಎಂದು ಹೇಳಲಾಗಿದೆ. ಯಾವುದೇ ಕಾರಣಕ್ಕೂ ಕೇಶಕ್ಕೆ ಕತ್ತರಿ ಹಾಕಬಾರದೆಂದು ಧಾರ್ಮಿಕ ಸಂಸ್ಥೆ ಹುಕುಂ ಹೊರಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ