ವಯನಾಡು ದುರಂತದಲ್ಲಿ ಬಗೆದಷ್ಟೂ ಸಿಗುತ್ತಿದೆ ಮೃತದೇಹಗಳು, ಸಾವಿನ ಸಂಖ್ಯೆ 288ಕ್ಕೆ ಏರಿಕೆ
"ಅನೇಕ ಮಂದಿ ನಾಪತ್ತೆಯಾಗಿದ್ದು, ಈಗಾಗಲೇ ಹಲವು ಶವಗಳನ್ನು ಹೊರತೆಗೆಯಲಾಗಿದೆ. ರಕ್ಷಣಾ ಪಡೆ ಚಾಲಿಯಾರ್ ನದಿಯಿಂದ ಹಲವು ದೇಹಗಳನ್ನು ಹೊರತೆಗೆದಿದ್ದಾರೆ. ದೇಹದ ಹಲವು ಭಾಗಗಳನ್ನು ಸಹ ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯ ಕೆಲವು ದಿನಗಳಲ್ಲಿ ಮುಗಿಯುವಂತದಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಸದ್ಯಕ್ಕೆ 12 ಸಚಿವರು ವಯನಾಡಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ಇದೀಗ ನಾಲ್ವರು ಸಚಿವರು ಇಲ್ಲಿಯೇ ಮೊಕ್ಕಾಂ ಹೂಡಲು ಸರ್ವಪಕ್ಷ ಸಭೆ ನಿರ್ಧರಿಸಿದೆ ಎಂದು ಹೇಳಿದರು.