ಗಮ್ ಬೂಟ್ ಹಾಕಿಕೊಂಡು ವಯನಾಡಿನ ಕೆಸರು ಮಣ್ಣಲ್ಲಿ ಅಕ್ಕ ಪ್ರಿಯಾಂಕಾ ಜೊತೆ ರಾಹುಲ್ ಗಾಂಧಿ ರೌಂಡ್ಸ್ ಹಾಕಿದ್ದು ಹೀಗೆ

Krishnaveni K

ಗುರುವಾರ, 1 ಆಗಸ್ಟ್ 2024 (14:59 IST)
ವಯನಾಡು: ಗುಡ್ಡ ಕುಸಿತದಿಂದಾಗಿ ನಿರ್ನಾಮವಾಗಿರುವ ವಯನಾಡಿಗೆ ಇಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಭೇಟಿ ನೀಡಿದ್ದಾರೆ.

ಗುಡ್ಡ ಕುಸಿತದಿಂದಾಗಿ ವಯನಾಡಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ 300 ಕ್ಕೆ ತಲುಪಿದೆ. ಇನ್ನೂ ನೂರಾರು ಜನ ನಾಪತ್ತೆಯಾಗಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ನಡುವೆ ಇಂದು ಇಲ್ಲಿನ ಸಂಸದ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕ ವಾದ್ರಾ ಜೊತೆ ಭೇಟಿ ನೀಡಿ ಪರಿಸ್ಥಿತಿಗಳ ಬಗ್ಗೆ ತಿಳಿದುಕೊಂಡರು.

ಗುಡ್ಡ ಕುಸಿತ ಸಂಭವಿಸಿದ ಸ್ಥಳ ಈಗ ಕೆಸರು ಗೆದ್ದೆಯಂತಾಗಿದೆ. ಮಣ್ಣು ಮತ್ತು ನೀರು ಸೇರಿಕೊಂಡು ನಡೆಯಲೂ ಕಷ್ಟವಾಗುವಂತಹ ಪರಿಸ್ಥಿತಿ ಎದುರಾಗಿದೆ. ಪರಿಹಾರ ಕಾರ್ಯ ಮುಂದುವರಿಸಲು ರಕ್ಷಣಾ ಸಿಬ್ಬಂದಿಗಳು ತಾತ್ಕಾಲಿಕವಾಗಿ ಸೇತುವೆ, ಡೇರೆಗಳನ್ನು ನಿರ್ಮಿಸಿಕೊಂಡಿದ್ದಾರೆ.

ಗಮ್ ಬೂಟ್ ಮತ್ತು ಮಳೆಯಿಂದ ರಕ್ಷಣೆಗಾಗಿ ರೈನ್ ಕೋಟ್ ಧರಿಸಿಕೊಂಡ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ದುರಂತ ಸಂಭವಿಸಿದ ಸ್ಥಳದಲ್ಲಿ ಓಡಾಡಿ ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ಈ ವೇಳೆ ಅಲ್ಲಿದ್ದ ಸಂತ್ರಸ್ತರು ರಾಹುಲ್ ಗಾಂಧಿ ಬಳಿ ತಮ್ಮ ಕಷ್ಟ ತೋಡಿಕೊಂಡರು. ಸುರಿಯುವ ಮಳೆಯ ನಡುವೆಯೂ  ರಾಹುಲ್ ಸ್ಥಳ ಪರಿಶೀಲನೆ ನಡೆಸಿದರು. ಚೂರ್ಲಮಲದ ದುರಂತ ಸ್ಥಳ, ಮೇಪ್ಪಾಡಿಯ ಸಂತ್ರಸ್ತರ ಕೇಂದ್ರಗಳಿಗೂ ರಾಹುಲ್ ಭೇಟಿ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ