ಭೂಗತವಾಗಿದ್ದ ಮಾರಣಾಂತಿಕ ವೈರಸ್‌ ಪತ್ತೆ

geetha

ಮಂಗಳವಾರ, 23 ಜನವರಿ 2024 (20:30 IST)
ಯುಎಸ್‌ : ಹಿಮದಲ್ಲಿ 48500 ವರ್ಷಗಳಿಂದ ಭೂಗತವಾಗಿದ್ದ, ಆದರೂ ಜೀವವುಳಿಸಿಕೊಂಡಿದ್ದ ಮಾರಣಾಂತಿಕ ವೈರಸ್‌ ಒಂದು ಪತ್ತೆಯಾಗಿದೆ.ಸೈಬಿರಿಯಾದ ಹಿಮ ಪ್ರದೇಶಗಳಿಂದ ಈ ವೈರಸ್‌ ನ ಮಾದರಿಗಳು ದೊರಕಿದ್ದು, ಇದು ಕನಿಷ್ಠ 48.5 ಸಾವಿರ ವರ್ಷ ಹಿಮದಡಿಯಲ್ಲಿ ಭೂಗತವಾಗಿರಬಹುದೆಂದು ಊಹಿಸಲಾಗಿದೆ. 

ಝೋಂಬಿ ವೈರಸ್‌ ಎಂದು ಹೆಸರಿಸಲಾಗಿರುವ ಈ ವೈರಸ್‌ ಹರಡಿದರೆ ಕೋವಿಡ್‌ ಗಿಂತಲೂ ಹೆಚ್ಚು ಅಪಾಯಕಾರಿ ಸಾಂಕ್ರಾಮಿಕ ಹರಡಬಹುದೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.ಆರ್ಟಿಕ್‌ ಮತ್ತು ಇತರೆ ಹಿಮ ಪ್ರದೇಶಗಳಲಿ ಮಂಜಿನ ಶಿಲೆಗಳಲ್ಲಿ ಈ ವೈರಸ್‌ ಅಡಗಿ ಕುಳಿತಿತ್ತು. ವಾತಾವಾರಣದ ಉಷ್ಣಾಂಶದಿಂದ ಹಿಮ ಕರಗುವ ಫರ್ಮಾಪಾಸ್ಟ್‌ ಎಂಬ ಪ್ರಕ್ರಿಯೆಯಿಂದ ಈ ವೈರಸ್‌ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ