ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ
ದೀಪಾವಳಿಯ ನಂತರ ಕಳೆದ ವರ್ಷವೂ ಚಳಿಗಾಲ ಪ್ರಾರಂಭದಲ್ಲಿ ದೆಹಲಿಯಲ್ಲಿ ಇದೇ ವಾತಾವರಣ ಸೃಷ್ಟಿಯಾಗಿತ್ತು. ಇದೀಗ ಮತ್ತೆ ಅಂತಹದ್ದೇ ಸಮಸ್ಯೆ ಎದುರಾಗಿದ್ದು, ವಾಹನ ಸಂಚಾರವೂ ಕಷ್ಟವಾಗಿದೆ. ವಿಷಪೂರಿತ ಅನಿಲದಿಂದಾಗಿ ಆರೋಗ್ಯ ಸಮಸ್ಯೆಗಳೂ ಎದುರಾಗುವ ಅಪಾಯವಿರುವುದರಿಂದ ಆದಷ್ಟು ಹೊರಗೆ ಸುತ್ತಾಡುವುದನ್ನು ಕಡಿಮೆ ಮಾಡುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.