ಕನ್ನಡ ಬರಲ್ವಾ, ದೆಹಲಿಗೆ ಬನ್ನಿ: ಬೆಂಗಳೂರಿಗೆ ಅವಮಾನಿಸಿದ ದೆಹಲಿ ಕಂಪನಿ ಸಿಇಒ

Krishnaveni K

ಶನಿವಾರ, 21 ಡಿಸೆಂಬರ್ 2024 (10:22 IST)
Photo Credit: X
ನವದೆಹಲಿ: ಇತ್ತೀಚೆಗೆ ಪರ ರಾಜ್ಯದವರು ಕರ್ನಾಟಕದಲ್ಲಿರುವ ಕಂಪನಿಗಳಿಗೆ ಗಾಳ ಹಾಕುವುದು ಸಾಮಾನ್ಯವಾಗಿದೆ. ಆದರೆ ದೆಹಲಿಯ ಕಂಪನಿಯೊಂದು ಬೆಂಗಳೂರಿಗ ಅವಮಾನವಾಗುವಂತಹ ಜಾಹೀರಾತು ನೀಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ದೆಹಲಿ ಮೂಲದ ಕಂಪನಿಯೊಂದರ ಸಿಇಒ ವಿಕ್ರಮ್ ಚೋಪ್ರಾ ಎಂಬವರು ಜಾಹೀರಾತೊಂದನ್ನು ನೀಡಿದ್ದ ಕನ್ನಡಿಗರ ಕಣ್ಣು ಕೆಂಪಗಾಗಿಸಿದೆ. ಈ ಜಾಹೀರಾತಿನಲ್ಲಿ ‘ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದರೂ ನಿಮಗೆ ಕನ್ನಡ ಬರಲ್ವಾ? ಚಿಂತೆಯಿಲ್ಲ, ನೀವು ದೆಹಲಿಗೆ ಬನ್ನಿ’ ಎಂದು ಜಾಹೀರಾತು ನೀಡಿದ್ದಾರೆ.

ವಿಕ್ರಮ್ ಚೋಪ್ರಾ ಕ್ರಿಯಾತ್ಮಕವಾಗಿ ನೀಡಿರುವ ಜಾಹೀರಾತಾದರೂ ಇದು ಬೆಂಗಳೂರಿಗೆ ಮಾಡಿದ ಅವಮಾನ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಹಿಂದಿ ಭಾಷಿಕರು ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ವಿಚಾರಕ್ಕೆ ಟೀಕೆಗೊಳಗಾಗಿರುವ ಹಿನ್ನಲೆಯಲ್ಲಿ ಈ ಜಾಹೀರಾತು ವಿವಾದಕ್ಕೆ ಕಾರಣವಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ನೀವು ಏನೇ ಮಾಡಿದರೂ ಬೆಂಗಳೂರಿನಷ್ಟು ನಿಮ್ಮ ದೆಹಲಿ ವಾಸ ಯೋಗ್ಯವಲ್ಲ. ಇಲ್ಲಿ ಅಲ್ಲಿನಷ್ಟು ವಾಯುಮಾಲಿನ್ಯವಲ್ಲ. ಹಾಗಾಗಿ ನಾವು ಬರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಕಲಿಯುವ ಯೋಗ್ಯತೆ ಇಲ್ಲ ಅಂದರೆ ಇಲ್ಲಿಂದ ಆರಾಮವಾಗಿ ಜಾಗ ಖಾಲಿ ಮಾಡಿ. ಅದರ ಬದಲು ಬೆಂಗಳೂರು ಬಿಟ್ಟು ದೆಹಲಿಯೇ ಚೆನ್ನಾಗಿದೆ ಎಂಬ ದುರಹಂಕಾರ ಯಾಕೆ ಎಂದು ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ