ದೇವಿ ದುರ್ಗೆಯನ್ನೇ ‘ಸೂಳೆ’ ಎಂದ ಪ್ರೊಫೆಸರ್!

ಭಾನುವಾರ, 24 ಸೆಪ್ಟಂಬರ್ 2017 (11:16 IST)
ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರೊಫೆಸರ್ ಒಬ್ಬರು ಹಿಂದೂ ಧರ್ಮೀಯರು ಬಹುವಾಗಿ ಆರಾಧಿಸುವ ದುರ್ಗಾ ಮಾತೆಯನ್ನೇ ಸೂಳೆ ಎಂದು ಫೇಸ್ ಬುಕ್ ನಲ್ಲಿ ಬರೆದು ಅಪಮಾನ ಮಾಡಿದ್ದಾರೆ ಎನ್ನಲಾಗಿದೆ.

 
ಪ್ರೊಫೆಸರ್ ಕೇದಾರ್ ಕುಮಾರ್ ಮಂಡಲ್ ಎಂಬಾತ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ‘ಭಾರತದ ಪೌರಾಣಿಕ ಕತೆಗಳಲ್ಲೇ ದುರ್ಗಾ ಮಾತೆ ಅತ್ಯಂತ ಸೆಕ್ಸಿ ಸೂಳೆ’ ಎಂದು ಬರೆದು ವಿವಾದಕ್ಕೀಡಾಗಿದ್ದಾರೆ.

ಸೆಪ್ಟೆಂಬರ್ 22 ರಂದು ಕೇದಾರ್ ಕುಮಾರ್ ಈ ಪೋಸ್ಟ್ ಪ್ರಕಟಿಸಿ ನಂತರ ಡಿಲೀಟ್ ಮಾಡಿದ್ದರು. ಆದರೆ ಅಷ್ಟರಲ್ಲಾಗಲೇ ಹಲವರು ಈ ಪೋಸ್ಟ್ ನ್ನು ನೋಡಿದ್ದಲ್ಲದೆ, ಪ್ರತಿಕ್ರಿಯಿಸಿದ್ದರು. ಇದೀಗ ಪ್ರೊಫೆಸರ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ಇದನ್ನೂ ಓದಿ.. ಸಿಎಂ ಬೀದಿ ದಾಸಯ್ಯನ ರೀತಿ ಮಾತನಾಡುತ್ತಾರೆ: ಕೆಎಸ್ ಈಶ್ವರಪ್ಪ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ