ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಪತಿರಾಯ ಹೀಗೆ ಮಾಡಿದನೆಂದು ಅಳುತ್ತಿರುವ ಮಹಿಳೆ
ಗಂಡ ತನಗೆ ಹೊಡೆದು ಹಿಂಸೆ ನೀಡಿರುವುದಲ್ಲದೆ, 3 ವರ್ಷದ ತಮ್ಮ ಪುತ್ರನೊಂದಿಗೆ ಮನೆಯಿಂದ ಹೊರ ಹಾಕಿದ್ದಾನೆಂದು ರುಬೀನಾ ದೂರಿನಲ್ಲಿ ತಿಳಿಸಿದ್ದಾಳೆ. ಐದು ವರ್ಷದ ಹಿಂದೆ ಅಫ್ಜಲ್ ಎಂಬಾತನೊಂದಿಗೆ ಈಕೆಗೆ ವಿವಾಹವಾಗಿತ್ತು. ಆದರೆ ಪತಿ ಅಫ್ಜಲ್ ದೈಹಿಕವಾಗಿ ಹಲ್ಲೆ ನಡೆಸಿದ ಕಾರಣಕ್ಕೆ ತಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದೆ. ಆಗ ಆತ ತಲಾಖ್ ನೀಡಿದ್ದಾನೆಂಬುದು ರುಬೀನಾ ದೂರು. ಪೊಲೀಸರು ಇದೀಗ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.