ದೇಶಕ್ಕೀಗ ಕೊರೋನಾದ ರೂಪಾಂತರಿ ಡೆಲ್ಟಾ ಪ್ಲಸ್ ಭೀತಿ

ಬುಧವಾರ, 23 ಜೂನ್ 2021 (09:26 IST)
ನವದೆಹಲಿ: ಎರಡನೇ ಅಲೆ ಕಡಿಮೆಯಾಗುತ್ತಿದೆ ಎಂಬ ಸಮಾಧಾನದಲ್ಲಿರುವ ದೇಶದ ಜನತೆಗೆ ಈಗ ಕೊರೋನಾದ ಮತ್ತೊಂದು ರೂಪಾಂತರಿ ಡೆಲ್ಟಾ ಪ್ಲಸ್ ಆತಂಕ ತಂದಿದೆ.


ದೇಶದಲ್ಲಿ ಈಗ ಒಟ್ಟಾರೆಯಾಗಿ 22 ಡೆಲ್ಟಾ ಪ್ಲಸ್ ಪ್ರಕರಣಗಳು ದೃಢಪಟ್ಟಿದೆ. ಮಹಾರಾಷ್ಟ್ರದಲ್ಲಿ 16 ಪ್ರಕರಣಗಳು, ಕೇರಳ ಮತ್ತು ಮಧ‍್ಯ ಪ್ರದೇಶದಲ್ಲಿ ಹೊಸ ತಳಿಯ ಕೊರೋನಾ ಪತ್ತೆಯಾಗಿದೆ.

ಕೇವಲ ಭಾರತ ಮಾತ್ರವಲ್ಲ, ಅಮೆರಿಕಾ, ಬ್ರಿಟನ್, ಜಪಾನ್, ನೇಪಾಳ ಸೇರಿದಂತೆ 9 ದೇಶಗಳಲ್ಲೂ ಈ ಅಪಾಯಕಾರಿ ರೂಪಾಂತರಿ ಕೊರೋನಾ ದಾಖಲಾಗಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಇಂತಹ ಪ್ರಕರಣಗಳು ಪತ್ತೆಯಾಗಿಲ್ಲ ಎನ್ನುವುದೇ ಸಮಾಧಾನಕರ ವಿಚಾರ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ