ನೇಪಾಳದ ಫೋಖ್ರಾದಲ್ಲಿ ಪತ್ತೆಯಾದ ಹನಿಪ್ರೀತ್: ಪೊಲೀಸ್

ಮಂಗಳವಾರ, 19 ಸೆಪ್ಟಂಬರ್ 2017 (16:12 IST)
ಅತ್ಯಾಚಾರ ಅಪರಾಧಿ ಡೇರಾ ಸಚಾ ಸೌಧಾದ ಬಾಬಾ ರಾಮ್ ರಹೀಮ್ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ನೇಪಾಳದ ಫೋಖ್ರಾದಲ್ಲಿ ಅಡಗಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 

ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಬಾಬಾ ರಾಮ್ ರಹೀಮ್ 20 ವರ್ಷ ಶಿಕ್ಷೆಗೆ ಗುರಿಯಾದ ನಂತರ ಹರಿಯಾಣದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು 43 ಆರೋಪಿಗಳ ಪಟ್ಟಿ ಮಾಡಿದ್ದಾರೆ. ಅದರಲ್ಲಿ ಹನಿಪ್ರೀತ್ ಮೊದಲ ಸ್ಥಾನ ಪಡೆದಿದ್ದಾಳೆ. 
 
ಹನಿಪ್ರೀತ್‌ ಪ್ರಯಾಣಿಸುತ್ತಿದ್ದ ವಾಹನದ ಹಿಂದೆ ಮೂರು ಬೆಂಗಾವಲು ವಾಹನಗಳಿರುವ ಮಾಹಿತಿ ಪಡೆದ ಹರಿಯಾಣಾ ಪೊಲೀಸರು, ನೇಪಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಫೋಖ್ರಾ ಜಿಲ್ಲೆಯಾದ್ಯಂತ ಗಸ್ತು ಹೆಚ್ಚಿಸಲಾಗಿದ್ದು ಸಶಶ್ತ್ರ ಸೀಮಾ ದಳವನ್ನು ಕಟ್ಟೆಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಹನಿಪ್ರೀತ್ ಹುಡುಕಾಟಕ್ಕಾಗಿ ನೇಪಾಳ ಪೊಲೀಸರು ಸಹಕಾರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.   
 
ನೇಪಾಳ ಪೊಲೀಸರು ಹನಿಪ್ರೀತ್ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದು, ಹರಿಯಾಣಾ ಪೊಲೀಸರು ಕೂಡಾ ಮಫ್ತಿಯಲ್ಲಿ ಹುಡುಕಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ