ಮಕ್ಕಳೂ ಸಾಕ್ಷಿಗಳಾಗಬಹುದೇ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಏನು ಹೇಳುತ್ತದೆ
ಇತ್ತೀಚೆಗೆ ತಂದೆಯೇ ತಾಯಿಯನ್ನು ಕೊಲೆ ಮಾಡಿದ್ದನ್ನು ಮಗು ಡ್ರಾಯಿಂಗ್ ಮಾಡಿ ಪೊಲೀಸರಿಗೆ ವಿವರಿಸಿತ್ತು. ಅಂತಹ ಅನೇಕ ಪ್ರಕರಣಗಳು ನಡೆಯುತ್ತಿರುತ್ತದೆ. ಒಂದು ಅಪರಾಧಕ್ಕೆ ಮಕ್ಕಳೇ ಸಾಕ್ಷಿಗಳಾಗಿರುತ್ತಾರೆ. ಆದರೆ ಕೆಲವೊಂದು ಪ್ರಕರಣಗಳಲ್ಲಿ ಮಕ್ಕಳ ಸಾಕ್ಷ್ಯಕ್ಕೆ ಬೆಲೆ ಇಲ್ಲ ಎಂದು ಕೇಸ್ ಬಿದ್ದು ಹೋಗುವುದು ಇದೆ.
ಆದರೆ ಈಗ ಸುಪ್ರೀಂಕೋರ್ಟ್ ಪ್ರಕರಣವೊಂದರ ವಿಚಾರಣೆ ವೇಳೆ ಮಹತ್ವದ ತೀರ್ಪು ನೀಡಿದೆ. ಮಕ್ಕಳ ಸಾಕ್ಷ್ಯವೂ ವಿಶ್ವಾಸಾರ್ಹ ಎಂದರೆ ಅದಕ್ಕೆ ಮಾನ್ಯತೆಯಿದೆ. ಮಕ್ಕಳ ಸಾಕ್ಷ್ಯವನ್ನೂ ಪರಿಗಣಿಸಬೇಕಾಗುತ್ತದೆ ಎಂದು ಮಹತ್ವದ ತೀರ್ಪು ನೀಡಿದೆ.
ಓರ್ವ ತನ್ನ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಏಳು ವರ್ಷದ ಮಗು ಪ್ರತ್ಯಕ್ಷ ಸಾಕ್ಷಿಯಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಗುವಿನ ಸಾಕ್ಷ್ಯವನ್ನು ಮಾನ್ಯ ಮಾಡಿದ್ದು ಈ ಮಹತ್ವದ ತೀರ್ಪು ನೀಡಿದೆ.