ತನಿಖೆಗೆ ಡಿಜಿಸಿಎ ಸೂಚನೆ?

ಸೋಮವಾರ, 4 ಜುಲೈ 2022 (10:33 IST)
ನವದೆಹಲಿ : ದೇಶದ ದೊಡ್ಡ ವಿಮಾನಯಾನ ಸಂಸ್ಥೆಯಲ್ಲಿ ಒಂದಾದ ಇಂಡಿಗೋದ ನೂರಾರು ಸಿಬ್ಬಂದಿಗಳ ರಜೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಡಿಜಿಸಿಎ ಸೂಚಿಸಿದೆ.
 
ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಇಂಟರ್ನ್ಯಾಶನಲ್ (ಎಸ್ವಿಪಿಐ) ವಿಮಾನ ನಿಲ್ದಾಣದಿಂದ 8 ಇಂಡಿಗೋ ವಿಮಾನಗಳು ಭಾನುವಾರ ತಡವಾಗಿತ್ತು.

ಈ ಬಗ್ಗೆ ಸಾಕಷ್ಟು ಸಂಖ್ಯೆಯ ಸಿಬ್ಬಂದಿಯ ಕೊರತೆಯಿಂದಾಗಿ ವಿಮಾನ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಅಷ್ಟೇ ಅಲ್ಲದೇ ಕೋಲ್ಕತ್ತಾ, ನಾಗ್ಪುರ, ಚಂಡೀಗಢ, ದೆಹಲಿ ಮತ್ತು ಮುಂಬೈಗೆ ಇಂಡಿಗೋ 5 ವಿಮಾನಗಳನ್ನು ರದ್ದುಗೊಳಿಸಲಾಗಿತ್ತು.

ಈ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ), ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಸಂಭವಿಸಿದ ವಿಮಾನ ವಿಳಂಬಕ್ಕೆ ಸ್ಪಷ್ಟೀಕರಣವನ್ನು ಕೋರಲಾಗಿದೆ. ಹೆಚ್ಚಿನ ಇಂಡಿಗೋ ಉದ್ಯೋಗಿಗಳು ಸಾಮೂಹಿಕ ಅನಾರೋಗ್ಯ ರಜೆಯಲ್ಲಿದ್ದರು ಎಂದು ತಿಳಿದು ಬಂದಿದೆ ಎಂದು ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ