ಉದ್ಯೋಗ ಕೊಡಿಸುವ ಭರವಸೆಯೊಡ್ಡಿ ರೇಪ್ ಎಸಗಿ ಬ್ಲ್ಯಾಕ್‌ಮೇಲ್

ಮಂಗಳವಾರ, 5 ಡಿಸೆಂಬರ್ 2023 (13:43 IST)
ಉದ್ಯೋಗ ಕೊಡಿಸುವ ಭರವಸೆಯಿಂದ ಸಂಬಂಧಿಯೊಬ್ಬರು ಆರೋಪಿ ಹಿರಿಯ  ಅಧಿಕಾರಿಯನ್ನು ಭೇಟಿ ಮಾಡಿಸಿದ್ದರು. ಮತ್ತೊಮ್ಮೆ ಕಚೇರಿಯಲ್ಲಿ ಭೇಟಿ ಮಾಡುವಂತೆ ಅಧಿಕಾರಿ ಕರೆ ಮಾಡಿದರು.ನಂತರ ಸರಕಾರಿ ಉದ್ಯೋಗ ಕೊಡಿಸುವ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ್ದಾರೆ ಎಂದು ಮಹಿಳೆಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
 
ಕಳೆದ ಎರಡು ವರ್ಷಗಳಿಂದ ಉದ್ಯೋಗ ಕೊಡಿಸುವ ಆಮಿಷ ತೋರಿಸಿ ಅತ್ಯಾಚಾರವೆಸಗಿದ್ದಲ್ಲದೇ ಬ್ಲ್ಯೂಫಿಲ್ಮ್ ತೆಗೆದು ಬ್ಲ್ಯಾಕ್‌ ಮಾಡುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯ ವಿರುದ್ಧ 26 ವರ್ಷ ವಯಸ್ಸಿನ ಯುವತಿ ಪೂರ್ವ ದೆಹಲಿಯ ಪಾಂಡವ್‌ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ
 
ಸುಮಾರು ಎರಡು ವರ್ಷಗಳ ಕಾಲ ಅತ್ಯಾಚಾರವೆಸಗಿ ಇದೀಗ ಉದ್ಯೋಗ ಕೊಡಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿ ಅಧಿಕಾರಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.
 
ಆರೋಪಿ ಅಧಿಕಾರಿ ನನ್ನೊಂದಿಗೆ ಸೆಕ್ಸ್‌ನಲ್ಲಿ ಭಾಗಿಯಾದ ಕೃತ್ಯವನ್ನು ಸಿಡಿ ಮಾಡಿಕೊಂಡಿದ್ದು, ಇಂಟರ್‌ನೆಟ್‌ನಲ್ಲಿ ಬಿಡುಗಡೆ ಮಾಡುವುದಾಗಿ ಹೆದರಿಸುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ