ಇಂದು ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಕುರಿತು ಚರ್ಚೆ
ಸೋಮವಾರ, 31 ಡಿಸೆಂಬರ್ 2018 (11:28 IST)
ನವದೆಹಲಿ: ಸಂಸತ್ತಿನ ಚಳಿಗಾಲದ ಅಧವೇಶನದಲ್ಲಿ ತಿದ್ದುಪಡಿ ಮಾಡಲಾದ ತ್ರಿವಳಿ ತಲಾಖ್ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಇಂದು ರಾಜ್ಯ ಸಭೆಯಲ್ಲೂ ತ್ರಿವಳಿ ತಲಾಖ್ ಮಸೂದೆ ಚರ್ಚೆಗೊಳಗಾಗಲಿದೆ.
ಈ ಮಸೂದೆ ಇಂದು ರಾಜ್ಯಸಭೆಯಲ್ಲೂ ಮಂಡನೆಯಾದರೆ ತ್ರಿವಳಿ ತಲಾಖ್ ಅನ್ನು ಅಸಾಂವಿಧಾನಿಕ ಮತ್ತು ಅಪರಾಧ ಎಂದ ಸುಪ್ರೀಂ ಕೋರ್ಟ್ ನಿಲುವನ್ನು ಸರ್ಕಾರ ಅನುಮೋದಿಸಿದಂತಾಗುತ್ತದೆ.
ಮುಸ್ಲಿಂ ಮಹಿಳೆಯರಿಗೆ ತಕ್ಷಣವೇ ವಿಚ್ಛೇದನ ನೀಡುವಂತಹ ಪದ್ಧತಿಗೆ ಕಡಿವಾಣ ಹಾಕಲು ಮುಸ್ಲಿಂ ಮಹಿಳೆಯರ ಮಸೂದೆ 2018 (ವಿವಾಹದ ಹಕ್ಕುಗಳ ರಕ್ಷಣೆ) ಮುಂದಾಗಿದೆ. ಮೌಖಿಕವಾಗಿ ತಲಾಖ್ ಹೇಳುವುದು ಅಥವಾ ವಾಟ್ಸಾಪ್, ಟೆಲಿಫೋನ್, ಪತ್ರ ಯಾವುದೇ ತಂತ್ರಜ್ಞಾನವನ್ನು ಬಳಸಿಕೊಂಡು ತಲಾಖ್ ಸಂದೇಶ ಕಳಿಸಿ ವಿಚ್ಛೇದನ ಪಡೆಯುವುದನ್ನೂ ಈ ಕಾಯ್ದೆ ಅಪರಾಧವೆಂದಿದೆ.