ಹೆದ್ದಾರಿಯಲ್ಲಿ ವಾಹನ ಸಂಚಾರ ಪುನಾರಂಭ

geetha

ಮಂಗಳವಾರ, 5 ಮಾರ್ಚ್ 2024 (14:45 IST)
ಹರಿಯಾಣಾ : ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ರೈತರು ದೆಹಲಿ ಚಲೋ ಯಾತ್ರೆ ನಡೆಸಿದ್ದರು. ಈ ವೇಳೆ ಎಲ್ಲ ಹೆದ್ದಾರಿಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ರೈತರೂ ಸಹ ಟ್ರಾಕ್ಟರ್‌ ಮತ್ತು ಸಿಮೆಂಟ್‌ ಬ್ಲಾಕ್‌ ಗಳನ್ನು ಅಡ್ಡಲಾಗಿರಿಸಿ ರಸ್ತೆ ತಡೆ ನಡೆಸಿದ್ದರು. ಹರಿಯಾಣಾ ಸರ್ಕಾರ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸುವಂತೆ ಆದೇಶಿಸಿತ್ತು.
 
 ರೈತರ ಮುಷ್ಕರದ ಕಾರಣದಿಂದ ವಾಹನ ಸಂಚಾರ ಸ್ಥಗಿತಗೊಂಡಿದ್ದ ಅಂಬಾಲಾ- ಚಂಡಿಗಡ ಹೆದ್ದಾರಿಯಲ್ಲಿ ಮಂಗಳವಾರದಿಂದ ವಾಹನ ಸಂಚಾರ ಪುನಾರಂಭಗೊಂಡಿದೆ.ಕಳೆದ 22 ದಿನಗಳಿಂದ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ವಾಹನ ಸಂಚಾರ ಪುನಾರಂಭಗೊಂಡಿದ್ದರೂ ರೈತರ ಪ್ರತಿಭಟನೆ ಎಂದಿನಂತೆಯೇ ಮುಂದುವರೆಯಲಿದೆ. 

ಮಿಕ್ಕಂತೆ ರೈತರ ಪ್ರಮುಖ ಪ್ರತಿಭಟನಾ ಕೇಂದ್ರಗಳಾದ ಖನೌರಿ ,ಶಂಭು ಜಿಲ್ಲೆಗಳಲ್ಲಿ ಪ್ರತಿಭಟನೆ ಎಂದಿನಂತೆ ಮುಂದುವರೆಸುವುದಾಗಿ ರೈತರು ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ