ದೆಹಲಿಗೂ ತಲುಪಿದ ಮಂಕಿಪಾಕ್ಸ್ !

ಭಾನುವಾರ, 24 ಜುಲೈ 2022 (14:08 IST)
ನವದೆಹಲಿ : ಯಾವುದೇ ವೀದೇಶ ಪ್ರಯಾಣದ ಇತಿಹಾಸ ಹೊಂದಿರದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕು ಕಾಣಿಸಿಕೊಂಡಿರುವುದು ದೆಹಲಿಯಲ್ಲಿ ವರದಿಯಾಗಿದೆ.

ಇದು ದೇಶದಲ್ಲಿ ಪತ್ತೆಯಾಗಿರುವ 4ನೇ ಕೇಸ್ ಆಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಗೆ ಮೊದಲ ಪ್ರಕರಣವಾಗಿದೆ.

31 ವರ್ಷದ ವ್ಯಕ್ತಿ ಜ್ವರ ಹಾಗೂ ಚರ್ಮದಲ್ಲಿ ಕಂಡುಬಂದ ಗುಳ್ಳೆಗಳಿಂದ ನಗರದ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದ. ಅಲ್ಲಿ ಇಂದು ಆತನಿಗೆ ಮಂಕಿಪಾಕ್ಸ್ ಇರುವುದು ಕಂಡುಬಂದಿದೆ. ಆತ ಇತ್ತೀಚೆಗೆ ಹಿಮಾಚಲ ಪ್ರದೇಶದಿಂದ ಹಿಂದಿರುಗಿದ್ದ ಎನ್ನಲಾಗಿದೆ. 

ಕಳೆದ ವಾರದಿಂದ ಭಾರತದಲ್ಲಿ ಒಂದಾದಮೇಲೊಂದರಂತೆ ಮಂಕಿಪಾಕ್ಸ್ ಪ್ರಕರಣಗಳು ಕಂಡುಬರುತ್ತಿವೆ. ಇಂದಿನ ಪ್ರಕರಣ ಸೇರಿ 4 ಕೇಸ್ಗಳು ದಾಖಲಾಗಿದ್ದು, 3 ಪ್ರಕರಣಗಳು ನೆರೆಯ ಕೇರಳದಲ್ಲಿ ಪತ್ತೆಯಾಗಿವೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ