ಪ್ರತಿಭಟನೆಗಳಿಂದ ರೈಲ್ವೇ ಇಲಾಖೆಗೆ ಎಷ್ಟು ನಷ್ಟ ಗೊತ್ತ?

ಶನಿವಾರ, 23 ಜುಲೈ 2022 (12:08 IST)
ನವದೆಹಲಿ : ಅಗ್ನಿಪಥ್ ಯೋಜನೆ ವಿರೋಧಿಸಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆ ಮತ್ತು ಹಿಂಸಾಚಾರಗಳಿಂದ ರೈಲ್ವೆ ಇಲಾಖೆಗೆ 259.44 ಕೋಟಿ ರೂ. ನಷ್ಟವಾಗಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

ಜೂನ್ 15 ರಿಂದ 23ರ ಅವಧಿಯಲ್ಲಿ 2,132 ರೈಲುಗಳ ಸಂಚಾರ ರದ್ದಾಗಿತ್ತು. ಈ ನಡುವೆ ಜೂನ್ 14 ರಿಂದ 30ರ ಅವಧಿಯಲ್ಲಿ 102 ರೂಪಾಯಿ ಹಣವನ್ನ ಪ್ರಯಾಣಿಕರಿಗೆ ಮರುಪಾವತಿ ಮಾಡಲಾಯಿತು.

ಈ ಕಾರಣಗಳಿಂದ 259.44 ಕೋಟಿ ರೂ. ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ