ಪತ್ನಿ ಸತ್ತ ಬಳಿಕ ಈ ವ್ಯಾಪಾರಿ ಅಪಹರಿಸಿಕೊಂಡು ಹೋಗಿದ್ದು ಯಾರನ್ನು ಗೊತ್ತೇ?

ಸೋಮವಾರ, 26 ಅಕ್ಟೋಬರ್ 2020 (11:32 IST)
ನವದೆಹಲಿ :  28 ವರ್ಷದ ತರಕಾರಿ ಮಾರಾಟಗಾರನೊಬ್ಬ 13 ವರ್ಷದ ಹುಡುಗಿಯ ಕುಟುಂಬದವರೊಂದಿಗೆ ಪರಿಚಯ ಮಾಡಿಕೊಂಡು ಬಳಿಕ ಹುಡುಗಿಯನ್ನು ಅಪಹರಿಸಿಕೊಂಡು ಹೋದ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ಆರೋಪಿ ಮೊಹಮ್ಮದ್ ದಿಲ್ವಾರ್ ಎಂದು ಗುರುತಿಸಲಾಗಿದೆ. ಈತ ದೆಹಲಿಯಲ್ಲಿ ಪತ್ನಿಯ ಜೊತೆ ಬಾಡಿಗೆಮನೆಯಲ್ಲಿ ವಾಸವಾಗಿದ್ದು, ಆಕೆ ಗರ್ಭಿಣಿಯಾದ ಬಳಿಕ ಅನಾರೋಗ್ಯದಿಂದ ಸಾವನಪ್ಪಿದ್ದಳು ಎನ್ನಲಾಗಿದೆ. ಬಳಿಕ ಈತ ಹುಡುಗಿಗೆ ಆಮಿಷಯೊಡ್ಡಿ ಅಪಹರಿಸಿಕೊಂಡು ಹೋಗಿದ್ದಾನೆ.

ಹುಡುಗಿ ಕಾಣೆಯಾದ ಹಿನ್ನಲೆಯಲ್ಲಿ ಆಕೆಯ ಮನೆಯವರು ಪೊಲೀಸ್ರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯ ವೇಳೆ ಸಿಸಿಟಿವಿ ಪರಿಶೀಲಿಸಿದಾಗ ಅಪಹರಣ ಬೆಳಕಿಗೆ ಬಂದಿದೆ. ಬಳಿಕ ಆತನನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿಯನ್ನು ಬಂಧಿಸಿ ಹುಡುಗಿಯನ್ನು ರಕ್ಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ