ತಾಯಿಯ ಮೇಲೆ ಹಲ್ಲೆ ಮಾಡಿದ ತಂದೆಗೆ ಮಗಳು ಮಾಡಿದ್ದೇನು ಗೊತ್ತಾ?
ಶುಕ್ರವಾರ, 23 ಅಕ್ಟೋಬರ್ 2020 (08:30 IST)
ಭೋಪಾಲ್ : ಮದ್ಯ ಸೇವಿಸಿ ತಾಯಿಯ ಮೇಲೆ ಹಲ್ಲೆ ಮಾಡುತ್ತಿದ್ದ 45 ವರ್ಷದ ತಂದೆಯನ್ನು 16 ವರ್ಷದ ಹುಡುಗಿ ಬ್ಯಾಟ್ ನಿಂದ ಹೊಡೆದು ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಹಿರಿಯ ಮಗನ ಮದುವೆಯ ಬಗ್ಗೆ ಚರ್ಚಿಸುವ ವೇಳೆ ಮದ್ಯದ ಅಮಲಿನಲ್ಲಿದ್ದ ತಂದೆ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ತಂದೆಯ ವರ್ತನೆಯಿಂದ ಕೋಪಗೊಂಡ ಹುಡುಗಿ ಅಲ್ಲಿದ್ದ ಬಟ್ಟೆ ವಾಶ್ ಮಾಡುವ ಬ್ಯಾಟ್ ತೆಗೆದುಕೊಂಡು ತಂದೆಗೆ ಹೊಡೆದಿದ್ದಾಳೆ. ತೀವ್ರ ರಕ್ತಸ್ರಾವದಿಂದ ತಂದೆ ಮೃತಪಟ್ಟಿದ್ದಾನೆ. ತಕ್ಷಣ ಆಕೆ ಪೊಲೀಸರಿಗೆ ಕರೆ ಮಾಡಿ ತನ್ನನ್ನು ಬಂಧಿಸುವಂತೆ ಹೇಳಿದ್ದಾಳೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.