ಕೋಚ್ ಪಿ. ಗೋಪಿಚಂದ್ ಮೇಲೆ ಪಿವಿ ಸಿಂಧು ತಂದೆಯ ಆರೋಪ

ಬುಧವಾರ, 21 ಅಕ್ಟೋಬರ್ 2020 (11:00 IST)
ಹೈದರಾಬಾದ್: ರಾಷ್ಟ್ರೀಯ ತರಬೇತಿ ಶಿಬಿರ ಬಿಟ್ಟು ದಿಡೀರ್ ಆಗಿ ಲಂಡನ್ ಸೇರಿಕೊಂಡಿರುವ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ತಂದೆ ರಮಣ್ ಕೋಚ್ ಪುಲ್ಲೇಲ ಗೋಪಿಚಂದ್ ವಿರುದ್ಧ ಆರೋಪ ಮಾಡಿದ್ದಾರೆ.


ಸಿಂಧು ನನಗೆ ಕುಟುಂಬಸ್ಥರೊಂದಿಗೆ ಅಥವಾ ಕೋಚ್ ಗೋಪಿಚಂದ್ ಜತೆಗೆ ಯಾವುದೇ ವೈಮನಸ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಅವರ ತಂದೆ ಆಂಗ್ಲ ಮಾಧ‍್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೋಚ್ ಗೋಪಿಚಂದ್ ನನ್ನ ಮಗಳಿಗೆ ಸರಿಯಾಗಿ ತರಬೇತಿ ನೀಡುತ್ತಿರಲಿಲ್ಲ. ಆಕೆಯ ತರಬೇತಿ ಕಡೆಗೆ ಗೋಪಿಚಂದ್ ಗಮನ ಕೊಡಲಿಲ್ಲ. ಇದರಿಂದ ಬೇಸತ್ತು ಅವಳು ಲಂಡನ್ ಗೆ ತೆರಳಿದ್ದಾಗಿ ಆರೋಪ ಮಾಡಿದ್ದಾರೆ. ಹಿಂದೆ ಸೈನಾ ನೆಹ್ವಾಲ್ ಕೂಡಾ ಗೋಪಿಚಂದ್ ಮೇಲೆ ಮುನಿಸಿಕೊಂಡಿದ್ದರು. ಇನ್ನು, ಕುಟುಂಬ ಕಲಹದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಆಂಗ್ಲ ಮಾಧ್ಯಮದ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಿವಿ ಸಿಂಧು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ