ಮಕ್ಕಳಿರದ ದಂಪತಿಗೆ ಚಿಕಿತ್ಸೆಯ ನೆಪದಲ್ಲಿ ವೈದ್ಯ ಹೇಳಿದ್ದೇನು ಗೊತ್ತಾ?

ಶನಿವಾರ, 27 ಅಕ್ಟೋಬರ್ 2018 (08:54 IST)
ಮಹಾರಾಷ್ಟ್ರ : ದಂಪತಿಗೆ ತನ್ನ ಮುಂದೆಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಸಲಹೆ ನೀಡಿದ ವೈದ್ಯನೊಬ್ಬನನ್ನು  ಪೊಲೀಸರು ಬಂಧಿಸಿದ್ದಾರೆ.


ಮಕ್ಕಳಿರದ ದಂಪತಿ ಚಿಕಿತ್ಸೆಗಾಗಿ ಯೋಗೇಶ್ ಎಂಬ ವೈದ್ಯನನ್ನು ಭೇಟಿಯಾಗಿದ್ದಾರೆ. 2 ವರ್ಷಗಳಿಂದ ಆತನ ಬಳಿಯೇ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡ ದಂಪತಿಗೆ ಮಕ್ಕಳಾಗಿರಲಿಲ್ಲ.


ಇದರಿಂದ ಬೇಸರಗೊಂಡಿದ್ದ ದಂಪತಿ ಮಗು ಪಡೆಯಲು ಏನು ಮಾಡಲು ಸಿದ್ಧರಾಗಿದ್ದರಾಗಿದ್ದಾರೆ ಎಂಬುದನ್ನು ಅರಿತ ವೈದ್ಯ ತನ್ನ ಮುಂದೆಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಸಲಹೆ ನೀಡಿದ್ದಾನೆ. ಇದರಿಂದ ನೀವು ಏನು ತಪ್ಪು ಮಾಡುತ್ತಿದ್ದೀರಿ ಎಂಬುದು ನನಗೆ ಅರ್ಥವಾಗಬೇಕು. ಆಗ ಸೂಕ್ತ ಸಲಹೆ ನೀಡಲು ಸಾಧ್ಯವೆಂದು ಹೇಳಿದ್ದಾನೆ.


ಈ ಘಟನೆಯಿಂದ ಮಹಿಳೆ ಒತ್ತಡಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ನಂತರ ಅವರು ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಕೋರ್ಟ್ ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಹಾಗೂ ದಂಪತಿಗೆ 10 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಸೂಚನೆ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ