ನಕಲಿ ನೋಟು ಕೊಟ್ಟು 2 ಲಕ್ಷ ರೂ. ಆಭರಣ ಎಗರಿಸಿದ ದಂಪತಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆಯುವ ಜಾಗದಲ್ಲಿ ಎಂಟರ್ ಟೈನ್ ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆದಿದ್ದ 500 ರೂ.ಗಳ 2 ಲಕ್ಷ ಮೌಲ್ಯದ ನೋಟು ನೀಡಿದ ದಂಪತಿ ಸುಮಾರು 1,90,000 ರೂ. ಮೌಲ್ಯದ 56 ಗ್ರಾಂ ಚಿನ್ನಾಭರಣ ಖರೀದಿ ಮಾಡಿದ್ದರು.
ದಂಪತಿ ಅಂಗಡಿಯಿಂದ ತೆರಳಿದ ಮೇಲಷ್ಟೇ ಮಾಲಿಕ ನೋಟನ್ನು ಪರಿಶೀಲಿಸಿದ್ದಾನೆ. ಪೊಲೀಸರು ಇದೀಗ ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲಿಸಿ ದಂಪತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.