ವಿದ್ಯಾರ್ಥಿನಿಯರನ್ನು ಮನೆಗೆ ಕರೆಸಿಕೊಂಡ ಹಾಸ್ಟೆಲ್‍ ನ ವಾರ್ಡನ್ ಆಮೇಲೆ ಮಾಡಿದ್ದೇನು ಗೊತ್ತಾ?

ಸೋಮವಾರ, 4 ಮಾರ್ಚ್ 2019 (09:02 IST)
ಜೈಪುರ : ಸರ್ಕಾರಿ ಹಾಸ್ಟೆಲ್‍ ನ ವಾರ್ಡನ್ ಇಬ್ಬರು ವಿದ್ಯಾರ್ಥಿನಿಯರನ್ನು ತನ್ನ ಮನೆಗೆ ಕರೆದುಕೊಂಡು ಬಂದು ಪತಿ ಮತ್ತು ಆತನ ಸ್ನೇಹಿತರ ಜೊತೆ ಸೇರಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.


ಹಾಸ್ಟೆಲ್ ವಾರ್ಡನ್ ಹಾಸ್ಟೆಲ್‍ನಲ್ಲಿದ್ದ 12ನೇ ತರಗತಿ ವಿದ್ಯಾರ್ಥಿನಿಯರನ್ನು ಮನೆಗೆ ಕರೆಸಿಕೊಂಡು ತನ್ನ ಪತಿ ಹಾಗೂ ಸ್ನೇಹಿತರ ಕಾಮತೃಷೆ ತೀರಿಸಿಕೊಳ್ಳಲು ಅವರ ಮೇಲೆ ಅತ್ಯಾಚಾರ ಮಾಡಿಸುತ್ತಿದ್ದಳು. ಮಿಗ್ ಕಮಾಂಡರ್ ಅಭಿನಂದನ್ ಅವರು ಪಾಕಿಸ್ತಾನದಿಂದ ಭಾರತಕ್ಕೆ ವಾಪಸ್ ಬಂದಿದ್ದರಿಂದ ಮಕ್ಕಳಿಗೆ ಸಿಹಿ ಹಂಚಲು ಬಂದ ಶಾಲೆಯ ಪ್ರಿನ್ಸಿಪಾಲ್ ಬಳಿ ವಿದ್ಯಾರ್ಥಿನಿಯರು ಪತ್ರದ ಮೂಲಕ ಈ ವಿಚಾರವನ್ನು ತಿಳಿಸಿದ್ದಾರೆ.


ಬಳಿಕ ಪ್ರಿನ್ಸಿಪಾಲ್ ಸಹಾಯದಿಂದ ಹುಡುಗಿಯರು ಶನಿವಾರ ಕಿಶನ್‍ಗಢ ಬಾಸ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ದ ಪೋಕ್ಸೋ ಕಾಯ್ದೆಯಡಿ ಎಫ್‍.ಐ.ಆರ್. ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಇತ್ತ ಶಾಲಾ ಅಧಿಕಾರಿಗಳು ಹಾಸ್ಟೆಲ್ ವಾರ್ಡನ್ ಅನ್ನು ಅಮಾನತುಗೊಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ