ಹೆರಿಗೆ ವೇಳೆ ಪುರುಷ ನರ್ಸ್ ನಿಂದ ಎಡವಟ್ಟು; ಎರಡು ತುಂಡಾದ ಮಗು, ತಾಯಿ ಸ್ಥಿತಿ ಗಂಭೀರ
ಶನಿವಾರ, 12 ಜನವರಿ 2019 (06:41 IST)
ಜೈಪುರ : ಹೆರಿಗೆ ಮಾಡಿಸುತ್ತಿದ್ದ ಸಮಯದಲ್ಲಿಪುರುಷ ನರ್ಸ್ ಮಾಡಿದ ಎಡವಟ್ಟಿನಿಂದ ಮಗು ಎರಡು ತುಂಡಾಗಿದ್ದು, ಪರಿಣಾಮ ತಾಯಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ರಾಜಸ್ಥಾನದ ರಾಮಗಢ ಜಿಲ್ಲೆಯಲ್ಲಿ ನಡೆದಿದೆ.
ಗರ್ಭಿಣಿಯೊಬ್ಬಳು ಹೆರಿಗೆಗಾಗಿ ರಾಮಗಢ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈ ವೇಳೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಪುರುಷ ನರ್ಸ್ ಮಗುವನ್ನು ಜೋರಾಗಿ ಎಳೆದಿದ್ದಾನೆ. ಪರಿಣಾಮ ಮಗು ಎರಡು ತುಂಡಾಗಿ ಕಾಲು ಮಾತ್ರ ಹೊರಬಂದಿದ್ದು, ತಲೆ ಹೊಟ್ಟೆಯಲ್ಲಿ ಉಳಿದುಕೊಂಡಿದೆ.
ಆಗ ಈ ವಿಚಾರವನ್ನು ಆಕೆಯ ಮನೆಯವರಿಗೆ ತಿಳಿಸದೆ ಆತನ ಸಹೋದ್ಯೋಗಿಗಳು ಮಗುವಿನ ಅರ್ಧ ಭಾಗವನ್ನು ಆಸ್ಪತ್ರೆಯ ಶವಾಗಾರದಲ್ಲಿಟ್ಟು, ಹೆಚ್ಚಿನ ಚಿಕಿತ್ಸೆಗಾಗಿ ತಾಯಿಯನ್ನು ಬೇರೆ ಆಸ್ಪತ್ರೆಗೆ ಶಿಪ್ಟ್ ಮಾಡಿದ್ದಾರೆ. ಅಲ್ಲಿ ವೈದ್ಯರ ತಂಡ ಮಹಿಳೆಗೆ ಚಿಕಿತ್ಸೆ ನೀಡಿ ಮಗುವಿನ ತಲೆಯನ್ನು ಹೊರ ತೆಗೆದಿದ್ದು, ಈ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದಾರೆ.
ಸದ್ಯಕ್ಕೆ ತಾಯಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿ ರಾಮಗಢ ಆಸ್ಪತ್ರೆಗೆ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.