ಅನೈತಿಕ ಸಂಬಂಧ ಆಕ್ಷೇಪಿಸಿದ ಪತ್ನಿಗೆ ಪತಿ ಮಾಡಿದ್ದೇನು ಗೊತ್ತಾ?

ಶುಕ್ರವಾರ, 8 ಡಿಸೆಂಬರ್ 2023 (12:54 IST)
ದೇಶದ ಬೀದಿ ಬೀದಿಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ನಿರಂತರವಾಗಿ ಚರ್ಚೆಯಾಗುತ್ತಿದೆ. ಆದರೆ, ಹೆಣ್ಣು ತನ್ನದೇ ಮನೆಯಲ್ಲಿ ಸುರಕ್ಷಿತವಾಗಿದ್ದಾಳೆಯೇ? ಇಲ್ಲೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಪತಿಯೇ ತನ್ನ ಪತ್ನಿಯ ನಗ್ನದೃಶ್ಯಗಳ ವಿಡಿಯೋ ಇಂಟರ್‌ನೆಟ್‌ನಲ್ಲಿ ಹಾಕಿದ್ದಾನೆ.
 
ವೈದ್ಯರೊಬ್ಬರು ಮದುವೆಯಾದ ಹೊಸದರಲ್ಲಿ ತಮ್ಮ ಪತ್ನಿಯ ಜತೆ ಶೃಂಗಾರದ ಕ್ಷಣಗಳನ್ನು ಕಳೆದಿದ್ದಾಗ ನಗ್ನ ಚಿತ್ರಗಳನ್ನು ತೆಗೆದಿದ್ದ. ಈಗ ಆ ದೃಶ್ಯಗಳನ್ನು ಇಂಟರ್‌ನೆಟ್‌ನಲ್ಲಿ ಅಪಲೋಡ್‌ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದರ ಪತ್ನಿ ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ಅವನನ್ನು ಬಂಧಿಸಿದರು.
 
ಡಾ. ನವದೀಪ್ ಕೌರ್ ತಮ್ಮ ಪತಿ ಪರನೀತ್ ಸಿಂಗ್ ಬ್ರಾರ್ ಅನ್ಯ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಕ್ಕೆ ನಾನು ಆಕ್ಷೇಪಿಸಿದ್ದೆ. ಆಗ ನನ್ನ ನಗ್ನ ಚಿತ್ರಗಳನ್ನು ಇಂಟರ್ನೆಟ್‌ನಲ್ಲಿ ಅಪಲೋಡ್ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ