ಪತ್ನಿಯ ಅನೈತಿಕ ಸಂಬಂಧ ಶಂಕೆ: ರಾಕ್ಷಸಿ ಕೃತ್ಯ ಮೆರೆದ ಪಾಪಿ ಪತಿ

ಮಂಗಳವಾರ, 5 ಡಿಸೆಂಬರ್ 2023 (13:15 IST)
ಸಂಶಯ ಎನ್ನುವುದು ಪಿಶಾಚಿಯಿದ್ದಂತೆ. ಒಂದು ಬಾರಿ ಅದು ತಲೆಯಲ್ಲಿ ಹೊಕ್ಕಿದರೆ ಸಾಕು ಪ್ರತಿಯೊಂದು ಅದೇ ರೀತಿ ಕಾಣಿಸುತ್ತದೆ. ಕಾಮಲೆ ಕಣ್ಣಿರುವವರಿಗೆ ಎಲ್ಲವು ತಮಗೆ ತೋಚಿದಂತೆ ಕಾಣುತ್ತದೆ. ಇಲ್ಲೊಬ್ಬ ಪತಿ ಮಹಾಶಯ ಪತ್ನಿಯ ಮೇಲೆ ಸಂಶಯಪಟ್ಟು ಇದೀಗ ಜೈಲು ಕಂಬಿ ಎಣಿಸುತ್ತಿದ್ದಾನೆ.
 
ಭುವನೇಶ್ವರ್‌ನ ಜಗಮಾರಾ ಜಿಲ್ಲೆಯ ನಿವಾಸಿಯಾಗಿದ್ದ ಪತಿ ರಂಜನ್ ಪಾಂಡಾ, ಪತ್ನಿ ಜಾಸೋಡಾ ನಡತೆ ಸಂಶಯಸಿ ಬ್ಲೇಡ್‌ನಿಂದ ಆಕೆಯ ಗುಪ್ತಾಂಗವನ್ನು ಕತ್ತರಿಸಿ ನಂತರ ಒಡೆದ ಟ್ಯೂಬ್‌ಲೈಟ್‌ನಿಂದ ಹೊಟ್ಟೆಗೆ ತಿವಿದು ರಾಕ್ಷಸಿ ಕೃತ್ಯವನ್ನು ಮೆರೆದಿದ್ದಾನೆ,
 
ದೆಹಲಿ ರೇಪ್ ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಿದೆ. ಆದರೆ, ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕೊನೆಯಿಲ್ಲದಂತಾಗಿದೆ. ಪತ್ನಿಯ ಅನೈತಿಕ ಸಂಬಂಧ ಶಂಕಿಸಿದ ಪತಿಯೊಬ್ಬ ಆಕೆಯ ಗುಪ್ತಾಂಗವನ್ನು ಕತ್ತರಿಸಿ ಹಾಕಿದ ಹೇಯ ಘಟನೆ ವರದಿಯಾಗಿದೆ.
 
ಪತ್ನಿಯ ದೂರಿನ ಮೇರೆಗೆ ಪೊಲೀಸರು ಆರೋಪಿ ಪಾಂಡಾನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ