ಅನಾರೋಗ್ಯ ಪೀಡಿತೆ ಪತ್ನಿಗೆ ಚಿಕಿತ್ಸೆ ಕೊಡಿಸಲಾಗದೆ ಪತಿ ಮಾಡಿದ್ದೇನು ಗೊತ್ತಾ?

ಶನಿವಾರ, 7 ಡಿಸೆಂಬರ್ 2019 (07:46 IST)
ಪಣಜಿ : ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಗೆ ಚಿಕಿತ್ಸೆ ಕೊಡಿಸಲಾಗದೆ ಪತಿಯೊಬ್ಬ ಆಕೆಯನ್ನು ಜೀವಂತವಾಗಿ ಸುಟ್ಟು ಹಾಕಿದ ಘಟನೆ ಗೋವಾದಲ್ಲಿ ನಡೆದಿದೆ.



ತುಕರಾಮ್ ಶೆಟ್ಗಾಂವ್ಕರ್ (46) ಕೊಲೆ ಮಾಡಿದ ಆರೋಪಿ, ತನ್ವಿ(44) ಮೃತಪಟ್ಟ ಪತ್ನಿ. ನರ್ವೆಸ್ ಗ್ರಾಮದಲ್ಲಿ ನಡೆಯುತ್ತಿರುವ ತಿಲಹರಿ ನೀರಾವರಿ ಯೋಜನೆಯ ನಿರ್ಮಾಣ ಜಾಗದಲ್ಲಿ  ಆತ ಈ ಕೃತ್ಯ ಎಸಗಿದ್ದಾನೆ. ಈ ಬಗ್ಗೆ ಅಲ್ಲಿದ್ದ ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ