ಪ್ರೀತಿಯನ್ನು ಸಾಬೀತುಪಡಿಸಲು ಯುವತಿ ಮಾಡಿದ್ದೇನು ಗೊತ್ತಾ?

ಮಂಗಳವಾರ, 5 ಡಿಸೆಂಬರ್ 2023 (11:13 IST)
ಕಳೆದ ಐದು ವರ್ಷಗಳಿಂದ ಅನಿತಾ ಎನ್ನುವ ಯುವತಿ ವಾಸೀಮ್ ಎನ್ನುವ ಯವಕ ಪ್ರಿತಿಸುತ್ತಿದ್ದರು. ಪ್ರಿಯಕರನೊಂದಿಗೆ ನಡೆದ ವಾಗ್ವಾದದಿಂದಾಗಿ ಆಕ್ರೋಶಗೊಂಡ ಯುವತಿ ಫ್ಲೈಓವರ್ ಮೇಲಿನಿಂದ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಪ್ರೀತಿಯನ್ನು ಸಾಬೀತುಪಡಿಸಲು 25 ವರ್ಷ ವಯಸ್ಸಿನ ಯುವತಿಯೊಬ್ಬಳು ಫ್ಲೈಓವರ್‌ನಿಂದ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ದಾರುಣ ಘಟನೆ ವರದಿಯಾಗಿದೆ.
 
ಪೂರ್ ದೆಹಲಿಯ ಮಯೂರ್ ವಿಹಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ಯುವತಿಯನ್ನು ಹತ್ತಿರವಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ವೈದ್ಯರು ಯುವತಿಯ ಆರೋಗ್ಯ ಪರೀಕ್ಷಿಸಿದ್ದು ಎರಡು ಕಾಲುಗಳು ಮುರಿದುಹೋಗಿವೆ ಎಂದು ತಿಳಿಸಿದ್ದಾರೆ.
 
ಪ್ರಿಯಕರ ವಾಸೀಮ್‌ಗೆ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥವಾಗಿದೆ ಎನ್ನುವ ಸುದ್ದಿಯನ್ನು ಗೆಳೆಯರಿಂದ ತಿಳಿದು ವಾಸೀಮ್‌ನನ್ನು ಭೇಟಿ ಮಾಡಲು ಆಗ್ರಾದಿಂದ ದೆಹಲಿಗೆ ಯುವತಿ ಆಗಮಿಸಿದ್ದಳು. ದೆಹಲಿಯಲ್ಲಿ ವಾಸೀಮ್‌ನನ್ನು ಭೇಟಿ ಮಾಡಿದ ಯುವತಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ನನ್ನ ಮೇಲೆ ಅಷ್ಟೊಂದು ಪ್ರಿತಿಯಿದ್ದಲ್ಲಿ ಫ್ಲೈಓವರ್‌ನಿಂದ ಹಾರಿ ಸಾಬೀತುಪಡಿಸು ಎಂದು ವಾಸೀಮ್ ಕಿಡಿಕಾರಿದ್ದಾನೆ.
 
ಪ್ರಿತಿಯನ್ನು ಸಾಬೀತುಪಡಿಸುವುದಾಗಿ ಹೇಳಿದ ಅನಿತಾ ಪ್ಲೈಓವರ್‌ ಮೇಲಿನಿಂದ ಹಾರಿದ್ದಾಳೆ. ಯುವತಿ ಫ್ಲೈಓವರ್‌ ಮೇಲಿನಿಂದ ಹಾರಿರುವುದನ್ನು ಕಂಡ ಪ್ರಿಯಕರ ವಾಸೀಮ್ ಅಲ್ಲಿಂದ ಕಾಲ್ಕಿತ್ತಿದ್ದಾನೆ.
 
ಅನಿತಾ ತನ್ನ ಪ್ರಿಯಕರ ವಾಸೀಮ್ ತಂದೆ ತಾಯಿಯನ್ನು ಸಂಪರ್ಕಿಸಿ ಮದುವೆ ಪ್ರಸ್ತಾಪವನ್ನಿಟ್ಟಿದ್ದಾಳೆ. ಆದರೆ, ಬೇರೆ ಸಮುದಾಯಕ್ಕೆ ಸೇರಿದ್ದರಿಂದ ವಿವಾಹಕ್ಕೆ ನಿರಾಕರಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಅಜಯ್ ಕುಮಾರ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ